(ವಿಶೇಷ ವರದಿ: ಎನ್.ಎನ್. ದಿನೇಶ್)

*ಗೋಣಿಕೊಪ್ಪಲು, ಜ. 20 : ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಿಸಿದ್ದ ಕಸ ವಿಲೇವಾರಿ ಘಟಕ ಪಂಚಾಯಿತಿಗಳ ನಿರ್ಲಕ್ಷ್ಯ ದಿಂದ ಹಳ್ಳ ಹಿಡಿದಿದೆ.

ಪೆÇನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಟ್ಟು ಸೀತಾ ಕಾಲೋನಿಯಲ್ಲಿ ಕಸ ಸಮಸ್ಯೆ ನೀಗಿಸಲು ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಘಟಕ ನಿರುಪಯುಕ್ತವಾಗಿದೆ.

ಗೋಣಿಕೊಪ್ಪಲು, ಪೆÇನ್ನಂಪೇಟೆ, ಅರುವತ್ತೊಕ್ಲು ಈ ಮೂರು ಪಂಚಾಯಿತಿಗಳ ಕಸವಿಲೇವಾರಿ ಸಮಸ್ಯೆಯನ್ನು ನೀಗಿಸಲು ಸೀತಾ ಕಾಲೋನಿಯಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಲಾಯಿತು. ಆದರೆ ಘಟಕ ನಿರ್ಮಿಸಿದಷ್ಟೇ ವೇಗದಲ್ಲಿ ನೇಪತ್ಯಕ್ಕೆ ಸರಿದು ಹೋಗಿದೆ. ಸರ್ಕಾರದ ಅನುದಾನವೊಂದು ಈ ಮೂರು ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯಕ್ಕೆ ಪೆÇೀಲಾಗಿದೆ.

ಕೆಲವು ತಾಂತ್ರಿಕ ಅಡಚಣೆಗಳಿಂದ ಘಟಕ ನಿರ್ಮಿಸಿದ್ದ ಸ್ಥಳದಲ್ಲಿ ಕಸ ವಿಲೇವಾರಿ ಮಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಸುಮಾರು 2 ಎಕರೆ ಸ್ಥಳವನ್ನು ಬಳಸಿ ಘಟಕ ನಿರ್ಮಿಸ ಲಾಗಿದೆ. ಮೂರು ಪಂಚಾಯಿತಿ ಗಳಿಂದ ಅನುದಾನ ನೀಡಿ ಘಟಕ ನಿರ್ಮಾಣವಾಗಿದೆ. ಮೂರು ಪಂಚಾಯಿತಿಗಳು 13ನೇ ಹಣಕಾಸು ಯೋಜನೆಯಡಿಯಲ್ಲಿ 2015-16ರ ಸಾಲಿನಲ್ಲಿ ಘಟಕದ ಆವರಣದ ಭದ್ರತಾ ಗೋಡೆ ಮತ್ತು ಗೇಟ್‍ಗಳ ನಿರ್ಮಾಣಕ್ಕೆ ರೂ. 15 ಲಕ್ಷ ಅನುದಾನ ವನ್ನು ಮತ್ತು ಇದರೊಂದಿಗೆ 3 ಪಂಚಾಯಿತಿಗಳು ತಲಾ ರೂ. 20 ಲಕ್ಷದಂತೆ ರೂ. 60 ಲಕ್ಷÀವನ್ನು ನೀಡಿದೆ. ಒಟ್ಟು ರೂ. 75 ಲಕ್ಷಗಳನ್ನು ಈ ಘಟಕ ನಿರ್ಮಾಣಕ್ಕೆ ಬಳಸ ಲಾಗಿದೆ. ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಿಸಿದರೂ ಕಸ ವಿಲೇವಾರಿಗೆ ಬಳಕೆಯಾಗುತ್ತಿಲ್ಲ. ಯೋಜನೆ ಯೊಂದು ನಿರುಪಯುಕ್ತವಾಗಿದೆ.

ಹಸಿ ಹಾಗೂ ಒಣ ಕಸ ತ್ಯಾಜ್ಯಗಳನ್ನು ಬೇರ್ಪಡಿಸಲು ಅಗತ್ಯವಾದ ಕಟ್ಟಡಗಳನ್ನು ನಿರ್ಮಿಸಿ ಘಟಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಹಲವು ವರ್ಷಗಳಿಂದ ಉಪಯೋಗಿಸದ ಘಟಕ ಪಾಳು ಬಿದ್ದಿದೆ. 19 ಎಕರೆ ಸರ್ಕಾರಿ ಜಾಗದಲ್ಲಿ 7 ಎಕರೆ ಜಾಗ ಬಳಕೆಯಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ 2 ಎಕರೆ ಜಾಗ ವನ್ನು ಕಸವಿಲೇವಾರಿಗೆ ಬಳಸಿ ಕೊಂಡಿದ್ದರೆ, 7 ಎಕರೆಯಲ್ಲಿ ಉಳಿದ 5 ಎಕರೆ ಸ್ಥಳದಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯದ ಸಂತ್ರಸ್ತರು 60 ಕುಟುಂಬಗಳಂತೆ 172 ಜನ ಆಶ್ರಯ ಹೊಂದಿದ್ದಾರೆ. ಈ ಕಾರಣ ದಿಂದ ಈ ಜಾಗದಲ್ಲಿ ಕಸವಿಲೇವಾರಿ ಮಾಡಲು ಕ್ರಮ ಕೈಗೊಂಡರೆ ವಾತಾವರಣ ಕಲುಷಿತಗೊಳ್ಳುತ್ತದೆ ಎಂದು ಇಲ್ಲಿನ ನಿವಾಸಿಗಳು ಕಸವಿಲೇವಾರಿ ಮಾಡಲು ಅವಕಾಶ ನೀಡದಂತೆ ಪ್ರತಿಭಟಿಸಿದ್ದಾರೆ. ಇದರಿಂದಾಗಿ ಲಕ್ಷ ವೆಚ್ಚದ ಘಟಕವೊಂದು ನಿರುಪಯುಕ್ತವಾಗಿದೆ.