ಪೆರಾಜೆ, ಜ. 19: ಗ್ರಾಮ ಪಂಚಾಯತ್ ಪೆರಾಜೆ ವ್ಯಾಪ್ತಿಯಲ್ಲಿ ಒಟ್ಟು 7.20 ಕೋಟಿ ಮೊತ್ತದ ಅನುದಾನದಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವು ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷÀ ಬಿ.ಎ. ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಹೊಸಮನೆ ಕವಿತಾ ಪ್ರಭಾಕರ್, ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತಳೂರ್ ಕಿಶೋರ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಹಾಗೂ ಪೆರಾಜೆ ಗ್ರಾಮ ಪಂಚಾಯಿತಿ ಸದಸ್ಯರುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪೆರಾಜೆ ಇದರ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ, ಸಂಘದ ನಿರ್ದೇಶಕರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು ಕೆ.ವಿ., ಗುತ್ತಿಗೆದಾರರುಗಳು, ಪೆರಾಜೆ ಗ್ರಾಮದ ಮುಖಂಡರುಗಳು, ಗ್ರಾಮದ ಆಯಾಯ ಭಾಗದ ಸಮಸ್ತ ಗ್ರಾಮಸ್ಥರು ಹಾಜರಿದ್ದರು.
ಶಂಕುಸ್ಥಾಪನೆಯ ವಿವರ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ನಿಡ್ಯಮಲೆ ವಾಂಗಲ್ ಪಾರೆ ಗಿರಿಜನ ರಸ್ತೆ ಕರಟಡ್ಕ - ನಿಡ್ಯಮಲೆ ಐನ್ ಮನೆ ರಸ್ತೆ , ಕುಂಬಳಚೇರಿ ನಿಡ್ಯಮಲೆ ರಸ್ತೆ ಅಭಿವೃದ್ಧಿ, ಕುಂಬಳಚೇರಿ ವ್ಯಾಪರೆ ರಸ್ತೆ ಅಭಿವೃದ್ಧಿ, ಕುಂಬಳಚೇರಿ ಕುಂಡಾಡು ಕಾಲೋನಿ ರಸ್ತೆ, ಅಮೆಚೂರು-ಕೋಟೆ ಪೆರಾಜೆ ರಸ್ತೆ ಅಭಿವೃದ್ಧಿ, ಬಂಗಾರಕೋಡಿ-ಕರಿಭೂತನ ಕೋಡಿ ರಸ್ತೆ ಅಭಿವೃದ್ಧಿ, ಪಾಳ್ಯ ಪೆರುಮುಂಡ- ಕುಂಡಾಡು ರಸ್ತೆ ಅಭಿವೃದ್ಧಿ, ಅಮೆಚೂರು ಶಾಲೆಯಲ್ಲಿ ಬಯಲು ರಂಗಮಂದಿರ ನಿರ್ಮಾಣ, ಪೆರಾಜೆ ಆರೋಗ್ಯ ಉಪ ಕೇಂದ್ರ ಕಟ್ಟಡ ದುರಸ್ತಿ, ಕುಂಬಳಚೇರಿ- ನಿಡ್ಯಮಲೆ-ಪಂಚಮಿಪಾರೆ ರಸ್ತೆ ಅಭಿವೃದ್ಧಿ, ಕುಂಬಳಚೇರಿ-ನೆಕ್ಕಿಲ ಮತ್ತು ಕೂರ್ನಡ್ಕ-ನೆಲ್ಲಡ್ಕ ರಸ್ತೆ ಅಭಿವೃದ್ಧಿ , ವ್ಯಾಪರೆ ಅಡ್ಕ ನದಿಗೆ ಸೇತುವೆ ನಿರ್ಮಾಣ, ಕುಂಡಾಡು-ಕಡ್ಯ ತೋಡಿಗೆ ಸೇತುವೆ ನಿರ್ಮಾಣ, ಕುಂಬಳಚೇರಿ-ಬಂಗಾರಕೋಡಿ ರಸ್ತೆಯ ಬಂಡಶಾಲೆ ಪಕ್ಕ ಸೇತುವೆ ನಿರ್ಮಾಣ, ಶ್ರೀ ಶಾಸ್ತಾವು ದೇವಸ್ಥಾನ ಪಕ್ಕ ಪಯಸ್ವಿನಿ ನದಿಗೆ ತಡೆಗೋಡೆ ನಿರ್ಮಾಣ.
ಅಡ್ಕ ದೈವಸ್ಥಾನದ ರಸ್ತೆಯ ತೋಡಿಗೆ ಸೇತುವೆ ನಿರ್ಮಾಣ, ನಿಡ್ಯಮಲೆ ಹಾಲೆಕಾಡು ಗಿರಿಜನ ಕಾಲೋನಿಗೆ ಕಾಂಕ್ರಿಟ್ ರಸ್ತೆ, ನಿಡ್ಯಮಲೆ-ವಾಂಗಲ್ ಪಾರೆ ಗಿರಿಜನ ಕಾಲೋನಿಗೆ ಕಾಂಕ್ರಿಟ್ ರಸ್ತೆ, ಬಂಗಾರಕೋಡಿ-ತೊಕ್ಕುಳಿ ರಸ್ತೆ, ತೊಕ್ಕುಳಿ ಕುಟುಂಬಸ್ಥರ ರಸ್ತೆ ಅಭಿವೃದ್ಧಿ, ನೆಡ್ಚಿಲ್-ಪೆರಂಗಜೆ ರಸ್ತೆ ಮತ್ತು ಕೊಳಂಗಾಯ ರಸ್ತೆಗೆ ಕಾಂಕ್ರೀಟಿಕರಣ, ಬಂಗಾರಕೋಡಿ-ಕೋಟೆ ಪೆರಾಜೆ ರಸ್ತೆ ಅಭಿವೃದ್ಧಿ, ಕುಂಬಳಚೇರಿ-ವ್ಯಾಪರೆ ರಸ್ತೆ ಅಭಿವೃದ್ಧಿ, ಅಮೆಚೂರು-ಪೆರಾಜೆ ಪಯಸ್ವಿನಿ ನದಿಗೆ ಸೇತುವೆ ನಿರ್ಮಾಣ, ಕುಂಬಳಚೇರಿ-ಕೆಂಗಮಟ್ಟೆ ಪ.ಜಾ ಕಾಲೋನಿ ರಸ್ತೆಗೆ ಕಾಂಕ್ರೀಟಿಕರಣ, ಅಲೆಟ್ಟಿ ರಸ್ತೆ ಅಭಿವೃದ್ಧಿ, ಪಯಸ್ವಿನಿ ನದಿಯ ಸೇತುವೆ ದುರಸ್ತಿ, ಬಂಗಾರಕೋಡಿ ರಸ್ತೆ ದುರಸ್ತಿ, ಕುಂಡಾಡು ರಸ್ತೆ ಅಭಿವೃದ್ಧಿ, ಹರಿಜನ ಕುಂಞ ಐತ ಸಂಪರ್ಕ ರಸ್ತೆ, ನಿಡ್ಯಮಲೆ ಗಿರಿಜನ ಕಾಲೋನಿ ಶ್ರೀ ವಿಷ್ಣುಮೂರ್ತಿ ದೈವ ಸ್ಥಾನಕ್ಕೆ ತಡೆಗೋಡೆ ನಿರ್ಮಾಣ, ಪೆರಾಜೆ-ಅಮೆಚೂರು, ನಿಡ್ಯಮಲೆ ಸಡಕ್ ರಸ್ತೆಗೆ ಮರುಡಾಮರಿಕರಣ, ಕುಂಬಳಚೇರಿ ಶ್ರೀ ವೈನಾಟ್ ಕುಲವನ್ ದೈವಸ್ಥಾನದ ಪಕ್ಕದ ತೋಡಿಗೆ ತಡೆಗೋಡೆ ನಿರ್ಮಾಣ, ಕನ್ನಡ ಪೆರಾಜೆ- ಅರಮನೆಪಾರೆ ರಸ್ತೆ ಅಭಿವೃದ್ಧಿ, ಪೆರಾಜೆ ಅಂಬಾಡಿ ಪ.ಜಾ. ಇವರ ದೈವಸ್ಥಾನಕ್ಕೆ ಅನುದಾನ. ಪೆರಾಜೆ ಗ್ರಾಮದಲ್ಲಿ ಕಾಮಗಾರಿ ನಡೆಯುವ ಆಯಾಯ ಭಾಗದ ಸಮಸ್ತ ಗ್ರಾಮಸ್ಥರು ಹಾಜರಿದ್ದರು.
- ವರದಿ: ಕಿರಣ್ ಕುಂಬಳಚೇರಿ