ಗೋಣಿಕೊಪ್ಪ ವರದಿ ಜ.19 : ಹಿಟ್ ಅಂಡ್ ರನ್ ಪ್ರಕರಣದಲ್ಲಿ ಪಾದಚಾರಿ ಸಾವಿಗೀಡಾಗಿದ ಘಟನೆ ಶನಿವಾರ ತಡರಾತ್ರಿ ಪಟ್ಟಣದಲ್ಲಿ ನಡೆದಿದ್ದು, ಕ್ಯಾಂಟಿನ್ ವ್ಯಾಪಾರಿ ನಂದ ಗೋಪಾಲ (54) ಮೃತ ದುರ್ದೈವಿ. ಮೂಲತಃ ಚೇರಂಬಾಣೆ ಗ್ರಾಮದವರಾಗಿದ್ದ ಇವರು ರಸ್ತೆ ದಾಟುತ್ತಿದ್ದ ಸಂದರ್ಭ ವೀರಾಜಪೇಟೆ ರಸ್ತೆ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ತಲೆಗೆ ಗಂಭೀರ ಪೆಟ್ಟಾಗಿ ನಂದ ಗೋಪಾಲ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗೋಣಿಕೊಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.