ಶನಿವಾರಸಂತೆ, ಜ. 19: ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯಸೇವಿಸಿ ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿ ಕಾರು
( ಕೆ.ಎ. 12 ಎಂ.ಎ. 1987) ಚಾಲನೆ ಮಾಡಿದ ಆರೋಪಿ ಟಿ.ಎನ್. ಅಭಿಲಾಷ್‍ಗೆ ನ್ಯಾಯಾಲಯ ರೂ. 11 ಸಾವಿರ ದಂಡ ವಿಧಿಸಿದೆ. ಜಂಬೂರು ಮಾದಾಪುರ ಗ್ರಾಮದ ಅಭಿಲಾಷ್ ಮದ್ಯಸೇವಿಸಿ ಸ್ನೇಹಿತ ಮುಳ್ಳೂರು ಗ್ರಾಮದ ತಾರೇಶ್‍ನೊಂದಿಗೆ ಕಾರು ಚಾಲನೆ ಮಾಡಿ ಅಸಭ್ಯ ರೀತಿಯಲ್ಲಿ ವರ್ತಿಸಿದ ಬಗ್ಗೆ ಸಹಾಯಕ ಠಾಣಾಧಿಕಾರಿ ಹೆಚ್.ಎ. ಗೋವಿಂದ್ ಕಾರನ್ನು ವಶಪಡಿಸಿಕೊಂಡು, ಮದ್ಯ ಸೇವನೆಯ ಬಗ್ಗೆ ಪರಿಶೀಲಿಸಿ; ಸೋಮವಾರಪೇಟೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಅಭಿಲಾಷ್‍ಗೆ ರೂ. 11 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದ್ದು; ತಾ. 13 ರಂದು ದಂಡ ಪಾವತಿಸಿ ಪೊಲೀಸ್ ವಶದಲ್ಲಿದ್ದ ಕಾರನ್ನು ಪಡೆದುಕೊಂಡಿದ್ದಾರೆ.