ಕೂಡಿಗೆ, ಜ. 19: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಲಾಪುರದ ಗ್ರಾಮದಲ್ಲಿ ಕಳೆದ ರಾತ್ರಿ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ ಅವರ ಜಮೀನಲ್ಲಿ ಬಾಳೆ ಮತ್ತು ಕೆಸ ಹಾಗೂ ಕೇನೆ ಬೆಳೆಗಳನ್ನು ತುಳಿದು ಕಾಡಾನೆ ನಷ್ಟ ಪಡಿಸಿವೆ. ಅಕ್ಕಪಕ್ಕದ ರೈತರ ಜಮೀನುಗಳಿಗೆ ದಾಳಿ ಮಾಡಿರುವ ಕಾಡಾನೆ ಕಳೆದ ಮೂರು ತಿಂಗಳುಗಳಿಂದ ರೈತರ ಬೆಳೆಗಳನ್ನು ಹಾನಿ ಮಾಡುತ್ತಿವೆ. ಸ್ಥಳಕ್ಕೆ ಹುದುಗೂರು ಅರಣ್ಯ ಉಪ ವಲಯ ಅಧಿಕಾರಿ ಸತೀಶ್‍ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.