ಮಡಿಕೇರಿ, ಜ.16 : ಜಿಲ್ಲೆಯ ಎಲ್ಲಾ ಹಿಂದೂ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಡಿಕೇರಿಯ ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ತಾ.18 ರಂದು ‘ಹಿಂದೂ ಕ್ರಿಕೆಟ್ ಕಪ್-2020’ ಪಂದ್ಯಾವಳಿ ನಡೆಯಲಿದೆ ಎಂದು ಕ್ಲಬ್‍ನ ಸದಸ್ಯ ಎನ್.ವಿನಯ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.18 ರಂದು ಬೆಳಗ್ಗೆ 9 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಕೀಲರಾದ ಎಂ.ಇ.ಮೋಹನ್ ಕುಮಾರ್ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 33,333 ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ 22,222 ರೂ. ನಗದು ಮತ್ತು ಟ್ರೋಫಿ ಹಾಗೂ ತೃತೀಯ ಸ್ಥಾನ ಪಡೆಯುವ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವುದು ಅಲ್ಲದೇ, ಬೆಸ್ಟ್ ಬ್ಯಾಟ್ಸ್‍ಮೆನ್, ಬೆಸ್ಟ್ ಬೌಲರ್ ಹಾಗೂ ಇತರ ಬಹುಮಾನ ನೀಡಲಾಗುವುದೆಂದರು.

ತಾ.19 ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸ ಲಾಗುವುದು. ಪಂದ್ಯಾವಳಿ ಯಲ್ಲಿ 40 ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಹೆಚ್ಚಿನ ಮಾಹಿತಿಗೆ 9880490536, 9900612664, ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಸದಸ್ಯರುಗಳಾದ ಕೆ.ಆರ್.ಪವನ್, ಬಿ.ಎಸ್.ಸಂದೀಪ್ ಕುಮಾರ್, ಆರ್.ಎಸ್.ಶಿವಮೂರ್ತಿ ಹಾಗೂ ಎಂ.ಕುಮಾರ್ ಉಪಸ್ಥಿತರಿದ್ದರು.