ಮಡಿಕೇರಿ, ಜ. 18: ಗೋಣಿಕೊಪ್ಪ - ಕುಟ್ಟ ರಾಜ್ಯ ಹೆದ್ದಾರಿಯಲ್ಲಿ ತಾ. 18ರ ಬೆಳಿಗ್ಗೆ ಕಾರೊಂದು ಅವಘಡಕ್ಕೀಡಾಗಿತ್ತು. ಕೇರಳ ಮೂಲದ ಟಾಟಾ ನೆಕ್ಸಾನ್ ಕಾರು ಪೋಕಳತೋಡು ಎಂಬಲ್ಲಿ ಎದುರಿನಿಂದ ಬಂದ ಬಸ್‍ಗೆ ಜಾಗ ಮಾಡಿಕೊಡುವ ಸಂದರ್ಭ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವ ಘಟನೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದು, ವಾಹನ ಸವಾರರು ಎಚ್ಚರವಹಿಸಬೇಕಿದೆ.