ಪೊನ್ನಂಪೇಟೆ, ಜ. 18: ಇತ್ತೀಚೆಗೆ ಮಾನಂದವಾಡಿಯಲ್ಲಿ ಏಳು ದೇಶಗಳು ಪಾಲ್ಗೊಂಡಿದ್ದ ಅಂತರ್ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪೊನ್ನಂಪೇಟೆ ಎಂ.ಜಿ. ನಗರದ ಬಿ.ಎಸ್. ಚಂಶಿತಾ ಸಂತೋಷ್ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಪೊನ್ನಂಪೇಟೆಯ ಕರಾಟೆ ತರಬೇತುದಾರ ಸೆನ್ಸಾಯ್ ಬಿ.ಎಸ್. ಸಂತೋಷ್ ಕುಮಾರ್ ಮತ್ತು ಅನಿತಾ ದಂಪತಿಯ ಪುತ್ರಿ. ಕರಾಟೆ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಹರ್ಷಿತಾ, ಲೋಚನ್ ದ್ವಿತೀಯ ಸ್ಥಾನ, ಗೌರವ್, ಭುವನ್, ರಿಷಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.