ಮಡಿಕೇರಿ, ಜ.17:ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ತಾ. 18 ರಂದು (ಇಂದು) ಸಂಜೆ 6 ಗಂಟೆಗೆ ನಗರದ ಓಂಕಾರ ಸದನದಲ್ಲಿ ಮೈಸೂರಿನ ಅಪರ್ಯಾಪ್ತ ತಂಡದಿಂದ ಕೌಶಿಕ್ ಘೋರ್ಪಡೆ ಹಾಗೂ ಉದಯನುಸ್ರತ್ ಸಾಬ್ರಿ ನೇತೃತ್ವದಲ್ಲಿ ‘ಮೆಹಫಿಲ್ ಸೂಫಿಯಾನ’ ಸೂಫಿ ಸಂತರ ಹಾಡುಗಳು ಹಾಗೂ ದಾಸರ ಪದಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

8 ರಿಂದ 10 ಮಂದಿಯ ತಂಡ ಕಾರ್ಯಕ್ರಮ ನೀಡಲಿದ್ದು, ಹಜ್ರತ್ ಅಮೀರ್ ಖುಸರೋ, ಕಬೀರ್‍ದಾಸ್, ಜಲಾಲುದ್ದೀನ್ ರೂಮಿ ಮಖ್ದೂಮ್ ಮುಂತಾದವರು ರಚಿಸಿದ ಹಾಡುಗಳ ಗಾಯನ, ಸುಮಾರು 2 ಗಂಟೆಗಳ ಕಾಲ ಮೂಡಿ ಬರಲಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಇತರರು ಪಾಲ್ಗೊಳ್ಳಲಿದ್ದಾರೆ.