ಶನಿವಾರಸಂತೆ, ಜ. 17: ಸಮೀಪದ ಕೊಡ್ಲಿಪೇಟೆ ಹೋಬಳಿ ನಿಲುವಾಗಿಲು-ಬೆಸೂರು ಗ್ರಾಮಗಳ ಶ್ರೀ ಬಾಲತ್ತಿಪುರ ಸುಂದರಿ ಕ್ಷೇತ್ರದಲ್ಲಿ ಅಮ್ಮನವರ ಜಾತ್ರಾ ಮಹೋತ್ಸವ ತಾ. 18ರಿಂದ (ಇಂದಿನಿಂದ) ತಾ. 30ರವರೆಗೆ ನಡೆಯಲಿದೆ.

7ನೇ ವರ್ಷದ ಜಾತ್ರಾ ಪ್ರಯುಕ್ತ ಉತ್ಸವ ಮೂರ್ತಿಯು ಶ್ರೀ ಕ್ಷೇತ್ರದ ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಗ್ರಾಮದ ಮುಖ್ಯ ದೇವಾಲಯದಲ್ಲಿ ಅಲಂಕರಿಸುತ್ತಾರೆ. ಭಕ್ತರು ದೇವಿಯನ್ನು ತಮ್ಮ ಗ್ರಾಮದಲ್ಲಿ ಸ್ವಾಗತಿಸಿ ಗ್ರಾಮದ ವತಿಯಿಂದ ಸಾಮೂಹಿಕ ಪೂಜಾ ಕಾರ್ಯವನ್ನು ಭಕ್ತಿಯಿಂದ ನಡೆಸಿಕೊಡುತ್ತಾರೆ. ನಿತ್ಯ ದಾಸೋಹಕ್ಕೆ ಕಾಣಿಕೆಯಾಗಿ ಧನಸಹಾಯ, ಭತ್ತ, ಅಕ್ಕಿ, ರಾಗಿ, ತೆಂಗಿನಕಾಯಿ, ತರಕಾರಿ, ಹಣ್ಣು ಹಂಪಲು ಕೊಡುತ್ತಾರೆ.

ಬೆಳಿಗ್ಗೆ 4.30ಕ್ಕೆ ದುರ್ಗಾ ಹೋಮ, 5.30ಕ್ಕೆ ನಿರ್ಮಲಾ ದರ್ಶನ, ಪ್ರಸನ್ನಪೂಜೆ, ಅಭಿಷೇಕ, ಮುಂಜಾನೆ 6ಕ್ಕೆ ಮಹಾಗಣಪತಿ ಹೋಮ, 6.30ಕ್ಕೆ ಧ್ವಜಾರೋಹಣ ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸಿ.ಬಿ. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ./