ಮಡಿಕೇರಿ, ಜ. 17: ಕೇಂದ್ರೀಯ ಸೈನಿಕ ಮತ್ತು ಪುನರ್ವಸತಿ ಇಲಾಖೆಯ ಹಿರಿಯ ಅಧಿಕಾರಿಗಳ 4ನೇ ದಕ್ಷಿಣ ವಲಯ ಸಮಾವೇಶ ತಾ. 22 ರಂದು ಮಧ್ಯಾಹ್ನ 3 ಗಂಟೆಗೆ ಮಡಿಕೇರಿಯ ಸೈನಿಕ ಮತ್ತು ಪುನರ್ವಸತಿ ಕಚೇರಿಯಲ್ಲಿ ಹಾಗೂ ತಾ. 23 ರಂದು ಬೆಳಿಗ್ಗೆ 8.30 ಗಂಟೆಗೆ ವೀರಾಜಪೇಟೆಯ ಮಹಿಳಾ ಸಮಾಜ ಕಟ್ಟಡದಲ್ಲಿ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಡಿಜಿಆರ್, ಇಸಿಹೆಚ್‍ಎಸ್ ಹಾಗೂ ಸಿಎಸ್‍ಡಿ ಕ್ಯಾಂಟಿನ್‍ಗಳ ನಿರ್ದೇಶಕರು ಉಪಸ್ಥಿತರಿರಲಿದ್ದಾರೆ. ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರತೆಗಳನ್ನು ನಿವಾರಿಸಿಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಕೋರಿದ್ದಾರೆ.