ನಾಪೆÇೀಕ್ಲು, ಜ. 17: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ವತಿಯಿಂದ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಹಿರಿಯ ವಿಭಾಗದಲ್ಲಿ ತಾನ್ಯ ಅಯ್ಯಪ್ಪ ಪ್ರಥಮ, ಅಬ್ದುಲ್ ಘನಿ ದ್ವಿತೀಯ, ಮೊಹಮ್ಮದ್ ಸವಾದ್ ತೃತೀಯ ಬಹುಮಾನ ಪಡೆದರೆ, ಕಿರಿಯ ವಿಭಾಗದಲ್ಲಿ ಮೇಘನ ಪಿ.ಎಂ ಪ್ರಥಮ, ಲಿತೇಶ್ ಎ.ಪಿ ದ್ವಿತೀಯ, ಮೊಹಮ್ಮದ್ ಶಂಶೀರ್ ತೃತೀಯ ಬಹುಮಾನ ಪಡೆದಿದ್ದಾರೆ.