ಮಡಿಕೇರಿ, ಜ. 16: ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ವತಿಯಿಂದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ತಾ. 18 ರಂದು ಸಂಜೆ 6 ಗಂಟೆಗೆ ನಗರದ ಓಂಕಾರ ಸದನದಲ್ಲಿ ಮೈಸೂರಿನ ಅಪರ್ಯಾಪ್ತ ತಂಡದಿಂದ ಕೌಶಿಕ್ ಘೋರ್ಪಡೆ ಹಾಗೂ ಉದಯನುಸ್ರತ್ ಸಾಬ್ರಿ ನೇತೃತ್ವದಲ್ಲಿ ‘ಮೆಹಫಿಲ್ ಸೂಫಿಯಾನ’ ಸೂಫಿ ಸಂತರ ಹಾಡುಗಳು ಹಾಗೂ ದಾಸರ ಪದಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 8 ರಿಂದ 10 ಮಂದಿಯ ತಂಡ ಕಾರ್ಯಕ್ರಮ ನೀಡಲಿದ್ದು, ಹಜ್ರತ್ ಅಮೀರ್ ಖುಸರೋ, ಕಬೀರ್‍ದಾಸ್, ಜಲಾಲುದ್ದೀನ್ ರೂಮಿ ಮಖ್ದೂಮ್ ಮುಂತಾದವರು ರಚಿಸಿದ ಹಾಡುಗಳ ಗಾಯನ, ಸುಮಾರು 2 ಗÀಂಟೆಗಳ ಕಾಲ ಮೂಡಿ ಬರಲಿದೆ.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆÀ ನೂರುನ್ನಿಸ ಉದ್ಘಾಟಿಸಲಿದ್ದಾರೆ.