ನಾಪೆÇೀಕ್ಲು, ಜ. 18: ದಿನದಿಂದ ದಿನಕ್ಕೆ ನಾಪೆÇೀಕ್ಲು ವಿಭಾಗದಲ್ಲಿ ಅಸ್ಸಾಮಿಗಳು ಎಂದು ಹೇಳಿಕೊಳ್ಳುತ್ತಿರುವ ಬಾಂಗ್ಲಾ ದೇಶಿಗರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಮುಂದೆ ಬಹಳ ತೊಂದರೆಯಾಗುವ ದಿನಗಳು ದೂರವಿಲ್ಲ ಎಂದು ನಾಪೆÉÇೀಕ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ ಹೇಳಿಕೆ ನೀಡಿದ್ದಾರೆ.
ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಇವರು ಪಕ್ಕ ಭಯೋತ್ಪಾದಕರಾಗಿದ್ದು, ಜಿಲ್ಲೆಯಲ್ಲಿ ಇಂತÀವರಿಂದ ಅಪರಾಧ ಪ್ರಕರಣಗಳು ನಡೆದಿದೆ. ಆದರೂ ಇವರ ಬಗ್ಗೆ ಜಿಲ್ಲಾಡಳಿತವಾಗಲಿ, ಪೊಲೀಸ್ ಇಲಾಖೆಯವರಾಗಲಿ ಯಾವುದೇ ನಿಗಾ ಇರಿಸಿಲ್ಲ ಎಂದ ಅವರು; ಈಗಾಗಲೇ ಕಾಫಿ ಕುಯಿಲು ನೆಪದಲ್ಲಿ ಈ ವಿಭಾಗದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ 10 ರಿಂದ 15 ಜನರು ಕಾರ್ಮಿಕರಾಗಿ ಅಸ್ಸಾಮಿಗಳು ಎಂದು ಹೇಳಿಕೊಂಡು, ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಬಗ್ಗೆ ಮಾಹಿತಿಯಾಗಲಿ ನಿಜವಾದ ವಿಳಾಸವನ್ನಾಗಲಿ ಇಲಾಖೆಯವರು ಕೇಳಿಲ್ಲ, ಕಾಫಿ ಬೆಳೆಗಾರರು ಇವರಿಗೆ ರಾಜಾಶ್ರಯ ನೀಡುತ್ತಿದ್ದು, ಮೊಬೈಲ್ ಫೋನ್, ವಾಸಕ್ಕೆ ಲೈನ್ ಮನೆ, ಟಿ.ವಿ. ಗ್ಯಾಸ್. ಎಲ್ಲವನ್ನು ಕಲ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಭಾಗದ ಯಾರ ಮನೆಯಲ್ಲಿ ಎಷ್ಟು ಜನ ಕಾರ್ಮಿಕರು ಇದ್ದಾರೆ, ಅವರ ಭಾವ ಚಿತ್ರ, ವಿಳಾಸವನ್ನು ಬೆಳೆಗಾರರು ಪೊಲೀಸ್ ಇಲಾಖೆಗೆ ನೀಡಬೇಕೆಂದ ಅವರು, ಪೊಲೀಸ್ ಇಲಾಖೆ ಈ ಬಗ್ಗೆ ಮಾಹಿತಿ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.