ಗೋಣಿಕೊಪ್ಪ ವರದಿ, ಜ. 16: ಇಲ್ಲಿನ ಕಾವೇರಿ ಪದವಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ತಾ. 18 ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ. 18 ವರ್ಷ ತುಂಬಿದ 55 ಕೆ.ಜಿ.ತೂಕ ಇರುವ ಯುವಜನತೆ ರಕ್ತದಾನ ಮಾಡಬಹುದಾಗಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ವರಗೆ ಶಿಬಿರ ನಡೆಯಲಿದೆ ಎಂದು ಎನ್‍ಎಸ್‍ಎಸ್ ಅಧಿಕಾರಿ ಮಂದೆಯಂಡ ವನಿತ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9880504208 ಸಂಪರ್ಕಿಸಬಹುದು.