ವೀರಾಜಪೇಟೆ, ಜ. 16: ಅಕ್ರಮವಾಗಿ ಸಂಪಿಗೆ ಹಾಗೂ ನಂದಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಜಬರ್‍ಲೀನ್ ಎಂಬಾತನನ್ನು ಬಂಧಿಸಿರುವ ಅರಣ್ಯ ಇಲಾಖೆ ವಾಹನ ಹಾಗೂ ಮರದ ನಾಟಾಗಳನ್ನು ವಶಪಡಿಸಿಕೊಂಡಿದೆ.

ಬೇತ್ರಿ ಗ್ರಾಮದ ಜಂಕ್ಷನ್ ಬಳಿ ಕೊಂಡಗೇರಿಯ ಜಬರ್‍ಲೀನ್ ಎಂಬಾತ ಪಿಕ್‍ಅಪ್ ವಾಹನದಲ್ಲಿ ಬೆಲೆಬಾಳುವ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಅರಣ್ಯ ವಲಯ ಉಪ ಸಂರಕ್ಷಣಾಧಿಕಾರಿ ಶಿವಶಂಕರ್, ಎಸಿಎಫ್ ರೋಷನಿ, ಅಧಿಕಾರಿ ಗಳಾದ ಸಚಿನ್ ನಿಂಬಾಳ್ಕರ್, ಚಂದ್ರಶೇಖರ್, ಅಮರೇಶ್, ವಿಕಾಸ್, ಪೌಲ್ ಡಿಸೋಜಾ, ಲತೇಶ್, ವಿಘ್ನೇಶ್ ಪಾಲ್ಗೊಂಡಿದ್ದರು.