ಸೋಮವಾರಪೇಟೆ, ಜ. 14: ತಾಲೂಕಿನ ಗೆಜ್ಜೆಹಣಕೋಡು ಗ್ರಾಮದ ಜಿ.ಎಸ್.ದಯಾನಂದ ಹಾಗೂ ಎಂ.ಪಿ.ಕವಿತ ದಂಪತಿಗಳ ಪುತ್ರಿ, ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ಡಾ. ಡಿ.ಸುಪ್ರಿಯಾ ಅವರಿಗೆ ಜರ್ಮನಿಯ ಕಾಸೆಲ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.

ಕಾಸೆಲ್ ವಿಶ್ವವಿದ್ಯಾನಿಲಯದ ರಿಸರ್ಚ್ ಗೈಡ್ ಪ್ರೊ. ಡಾ.ಮಿಷೇಲ್ ವ್ಯಾಕೆಂಡಾಫ್ ಅವರ ಮಾರ್ಗದರ್ಶನದಲ್ಲಿ ಖಿhe ಣhesis ಣiಣಚಿಟ ತಿಚಿs ಇvಚಿಟuಚಿಣioಟಿ oಜಿ ಡಿemoಣe seಟಿsiಟಿg bಚಿseಜ sಠಿeಛಿಣಡಿಚಿಟ ಚಿಟಿಜ 3ಆ ಠಿoiಟಿಣ ಛಿಟouಜ ಜಚಿಣಚಿ ಜಿoಡಿ ಛಿಡಿoಠಿ biomಚಿss esಣimಚಿಣioಟಿ iಟಿ souಣheಡಿಟಿ Iಟಿಜiಚಿ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.

ಬಾಳುಪೇಟೆ, ಸೋಮವಾರಪೇಟೆ, ಮಡಿಕೇರಿ, ದಕ್ಷಿಣ ಕನ್ನಡದಲ್ಲಿ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಪ್ರಿಯಾ ಅವರು, ಕಳೆದ ಮೂರು ವರ್ಷಗಳಿಂದ ಜರ್ಮನಿಯ ವಿಶ್ಯವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕರಾಟೆ, ಗೈಡ್ಸ್‍ನಲ್ಲಿ ರಾಷ್ಟ್ರಮಟ್ಟದ ಸಾಹಸಿ ಶಿಬಿರಾರ್ಥಿ ಪ್ರಶಸ್ತಿ, ಎನ್.ಎಸ್.ಎಸ್. ಪ್ರಶಸ್ತಿಗಳನ್ನು ಪಡೆದಿರುವ ಸುಪ್ರಿಯಾ ಅವರು, ಬೆಲ್ಜಿಯಂ, ನೆದರ್‍ಲ್ಯಾಂಡ್, ಇಟಲಿ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸ್ವಿಟ್ಜರ್‍ಲ್ಯಾಂಡ್, ಸ್ವೀಡನ್, ಡೆನ್ಮಾರ್ಕ್, ಅಬುದಾಬಿ, ಚೆಕ್‍ಗಣರಾಜ್ಯ, ಕ್ರೊಯೆಶಿಯ, ಹಂಗೇರಿ, ರಿಯಾದ್, ನಾರ್ವೆ, ಸ್ಪೈನ್, ಪೊಲ್ಯಾಂಡ್, ಪೊರ್ಚುಗಲ್ ಹೀಗೆ ಸುಮಾರು 23 ದೇಶಗಳಲ್ಲಿ ಭಾರತದ ಕೃಷಿ ಹಾಗೂ ತರಕಾರಿಗಳ ಬಗ್ಗೆ ವಿಷಯ ಮಂಡಿಸಿದ್ದಾರೆ.

‘ನಾನು ಗ್ರಾಮೀಣ ಭಾಗದ ಕೃಷಿಕ ಕುಟುಂಬದಿಂದ ಬಂದಿದ್ದು, ಕೃಷಿಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಹವಾಮಾನಕ್ಕೆ ಅನುಗುಣವಾಗಿ ಮಳೆಗಾಲದಲ್ಲಿ ಜೋಳ, ರಾಗಿ, ಅವರೆ, ಮೊಟ್ಟೆಕೋಸು, ಬೇಸಿಗೆಯಲ್ಲಿ ಬದನೆ, ಟೊಮೆಟೊ ತಳಿಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದೇನೆ ಎಂದು ಸುಪ್ರಿಯಾ

ತಿಳಿಸಿದ್ದಾರೆ.