*ಗೋಣಿಕೊಪ್ಪಲು, ಜ. 14: ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ರೇಷ್ಮೆಹಡ್ಲು, ಆನೆಚೌಕುರು ಗೇಟ್ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ವೀರಾಜಪೇಟೆ ತಾಲೂಕು ಪೆÇಲೀಸ್ ಅರಣ್ಯ ಸಂಚಾರಿ ದಳದ ವತಿಯಿಂದ ಅಳಿವಿನಂಚಿನಲ್ಲಿರುವ ಆಮೆ ಹಾಗೂ ಗಿಳಿಗಳ ರಕ್ಷಣೆ ಮತ್ತು ಅರಿವಿನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಹಾಡಿ ನಿವಾಸಿಗಳಿಗೆ, ಸ್ಥಳೀಯರಿಗೆ ಹಾಗೂ ವಿದ್ಯಾರ್ಥಿ ಗಳಿಗೆ ಅಳಿವಿನಂಚಿನಲ್ಲಿರುವ ಆಮೆ, ಗಿಳಿಗಳ ಬಗ್ಗೆ ಕರಪತ್ರಗಳನ್ನು ಹಂಚುವ ಮೂಲಕ ಮಾಹಿತಿಯನ್ನು ನೀಡಲಾಯಿತು. ಆಮೆ ವಾಸ್ತು ಅಥವಾ ಔಷಧ ವಸ್ತು ಅಲ್ಲ. ಆಮೆ ವಾಸ್ತು ಎಂದು ಮೂಢನಂಬಿಕೆಯನ್ನು ಹಬ್ಬಿಸಲಾಗಿದೆ. ಗಿಳಿ ಶಾಸ್ತ್ರ ಹೇಳುವ ಪಕ್ಷಿಯಲ್ಲ. ಮಾನವನ ಸ್ವಾರ್ಥಕ್ಕಾಗಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿ ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ಉಳಿಸಲು ವೈಜ್ಞಾನಿಕ ಚಿಂತನೆ ಮೂಡಿಸಬೇಕು ಎಂದು ಸಲಹೆ ನೀಡಲಾಯಿತು.
ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪೆÇಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಮಂಜುನಾಥ್, ಗಣೇಶ್ ಎಂ.ಬಿ., ಸ್ಥಳೀಯ ಗ್ರಾ.ಪಂ. ಸದಸ್ಯರು, ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಕಾಲೇಜು ಪ್ರಾಂಶುಪಾಲರು, ಅರಣ್ಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.