ಮಡಿಕೇರಿ, ಜ. 14: ಓಡಿಪಿ ಸಂಸ್ಥೆ ಹಾಗೂ ನಬಾರ್ಡ್ ಸಂಸ್ಥೆ ಸಹಯೋಗದೊಂದಿಗೆ ಹೊಲಿಗೆ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿ ಉದ್ಘಾಟನೆ ಕಾರ್ಯಕ್ರಮ ವನ್ನು ಸಂತ ಮೈಕಲರ ಕಾಲೇಜು ಆವರಣದಲ್ಲಿ ನಡೆಸಲಾಯಿತು. ಮಡಿಕೇರಿ, ಸಿದ್ದಾಪುರ, ಕುಶಾಲನಗರ ಸೇರಿ 3 ಕಡೆಗಳಲ್ಲಿ 90 ಮಹಿಳೆಯರು, ಯುವತಿಯರಿಗೆ ಓ.ಡಿ.ಪಿ. ಸಂಸ್ಥೆ ಮತ್ತು ನಬಾರ್ಡ್ ಮೂಲಕ ಫ್ಯಾಷನ್ ಡಿಸೈನಿಂಗ್ ತರಬೇತಿಯನ್ನು 2 ತಿಂಗಳುಗಳ ಕಾಲ ನಡೆಸಲಾಗುತ್ತದೆÉ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಮಾತನಾಡಿ, ಮಕ್ಕಳು ಶಿಕ್ಷಣದ ಕಡೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ತಿಳಿಸಿದರು. ಸ್ವತಂತ್ರವಾಗಿ ಒಬ್ಬ ಮಹಿಳೆ ತನ್ನ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಸಂಸ್ಥೆಗಳಿಂದ ನೀಡುವ ಫ್ಯಾಷನ್ ಡಿಸೈನಿಂಗ್ ಹಾಗೂ ಇತರ ತರಬೇತಿ ಪಡೆದು ಸ್ವ ಉದ್ಯೋಗ ಮಾಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಪಡೆಯಬೇಕಾಗಿ ಕೂಡ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಫಾದರ್ ಅಲೆಕ್ಸ್ ಪ್ರಶಾಂತ ಮಾತನಾಡಿ, ಭಾರತದ ಅಭಿವೃದ್ಧಿಗೆ ಹಳ್ಳಿಯ ಮಹಿಳೆಯರ ಪಾತ್ರ ಅತಿ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಹಲವು ಅಧಿಕಾರಿಗಳೂ ಮಹಿಳೆಯರೇ ಆಗಿದ್ದು ಇವರುಗಳಿಂದ ಸ್ಫೂರ್ತಿ ಪಡೆದುಕೊಳ್ಳಬೇಕಾಗಿದೆ ಎಂದರು.
ನÀಬಾರ್ಡ್ ಸಂಸ್ಥೆಯ ಶ್ರೀನಿವಾಸ ಮಾತನಾಡಿ ಸ್ವಸಹಾಯ ಸಂಘಗಳು ಬ್ಯಾಂಕಿನ ಜೊತೆ ನಿಕಟ ಸಂಬಂಧ ಹೊಂದಿ ಸಾಲವನ್ನು ಪಡೆದು ಆರ್ಥಿಕ ಚಟುವಟಿಕೆ ಮಾಡುತ್ತಾ ಸಾಲ ಮರುಪಾವತಿ ಈಗಾಗಲೇ ಆಗುತ್ತಿದೆ. ಫ್ಯಾಷನ್ ತರಬೇತಿ ಪಡೆದು ಹೊಸ ಹೊಸ ವಿನ್ಯಾಸಗಳು ಜನರ ಬೇಡಿಕೆಗೆ ತಕ್ಕಂತೆ ಮಾಡಿ ಮಾರುಕಟ್ಟೆ ವ್ಯವಸ್ಥೆ ಮಾಡುವುದರ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಬಾಲಚಂದ್ರ, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಶೋಭ, ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಸಿ.ಎನ್. ರಘು, ಕೌಶಲ್ಯ ಅಭಿವೃದ್ಧಿ ಸಂಯೋಜಕಿ ಲಲಿತ, ಒಡಿಪಿಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮಿನೆಜೆಸ್ ಮೈಸೂರು ಒ.ಡಿ.ಪಿ.ಯ ಸಂಯೋಜಕರಾದ ಮೋಲಿ ಪೊಡ್ತಾದೊ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒ.ಡಿ.ಪಿ. ಕಾರ್ಯಕರ್ತರಾದ ವಿಜಯ್ ಸ್ವಾಗತಿಸಿ, ಲೀನಾ ವಂದನಾರ್ಪಣೆ ನೆರವೇರಿಸಿದರು.