ಸುಂಟಿಕೊಪ್ಪ, ಜ. 14: ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ಬಿಲ್ಲವ ವಿದ್ಯಾರ್ಥಿ ಘಟಕದ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೆಜ್ಜೆಗಿರಿಯ ಕೋಟಿಚೆನ್ನಯ್ಯರ ಜನ್ಮ ಸ್ಥಳದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಕರಸೇವೆಯಲ್ಲಿ ತೊಡಗಿಕೊಂಡರು.

ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಆದಿತ್ಯ, ಸದಸ್ಯರಾದ ಬಾಲಕೃಷ್ಣ, ನಾಗಮ್ಮ, ಶಶಿಕಲಾ ಇತರರು ಇದ್ದರು.