ಕೂಡಿಗೆ, ಜ. 13: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಬೆಳೆದಿರುವ ಬಾಳೆ, ಕೆಸ, ಗೆಣಸು ಬೆಳೆಗಳು ನಾಶವಾಗುತ್ತಿವೆ.

ಬಾಣಾವರ ಅರಣ್ಯದಂಚಿನಿಂದ ಬರುತ್ತಿರುವ ಕಾಡಾನೆಗಳು ಜೇನುಕಲ್ಲು ಮಂಟಿಯ ಸರಹದ್ದಿನಲ್ಲಿಯೇ ಅಡ್ಡಾಡುತಿದ್ದು, ಸಂಜೆ ವೇಳೆ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿವೆ.

ಒಂದೆಡೆ ಚಿರತೆ ಪ್ರತ್ಯಕ್ಷಗೊಂಡು ಭಯಭೀತಗೊಂಡಿರುವ ಗ್ರಾಮಸ್ಥರು ಕಾಡಾನೆಗಳ ಹಾವಳಿಯಿಂದ ಮತ್ತಷ್ಟು ಆತಂಕದಲ್ಲಿದ್ದಾರೆ.