ಮಡಿಕೇರಿ, ಜ. 13 : ನಗರದ ಮುಳಿಯ ಜ್ಯುವೆಲ್ಸ್ ಸಂಸ್ಥೆ ಹಿಂದಿನ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣದ ಕೊಡುಗೆ ನೀಡುತ್ತಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಸಾರ್ವಜನಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಂಡಿದ್ದು, ತಮ್ಮ ಸಂಸ್ಥೆ ಕೊಡಗು ಪ್ರಕೃತಿ ವಿಕೋಪ ಸಂದರ್ಭ ಜನರ ನೆರವಿಗೆ ಧಾವಿಸಿ ತನು-ಮನ-ಧನದ ಸಹಾಯ ಕಲ್ಪಿಸಿರುವುದಾಗಿ ವಿವರಿಸಿದರು. ಮುಳಿಯ ಪ್ರತಿಷ್ಠಾನವು ಹಲವು ಸಮಾಜಮುಖಿ ಕೆಲಸಗಳನ್ನು ಜಿಲ್ಲೆಯಲ್ಲಿ ನಡೆಸಿಕೊಂಡು ಬರುತ್ತಿರುವ ಬಗ್ಗೆ ಅವರು ಮೆಲುಕು ಹಾಕಿದರು.

ಹೊಸ ಕಟ್ಟಡ ಉದ್ಘಾಟನೆ : ತಾ. 18ರಂದು ಸಂಸ್ಥೆ ಮಹದೇವಪೇಟೆಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಬೆಳಿಗ್ಗೆ 10.30ಕ್ಕೆ ಮುಳಿಯ ಜ್ಯುವೆಲ್ಸ್‍ನ ಶೋರೂಂನ್ನು ಚಿತ್ರನಟಿ ಹರ್ಷಿಕಾ ಪೂಣಚ್ಚ ಹಾಗೂ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ (ಸನ್ನಿಧಿ) ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕÀ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕÀ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಮುಳಿಯ ಸಮೂಹ ಸಂಸ್ಥೆಯ ದಿಗ್ದರ್ಶಕ ಮುಳಿಯ ಶ್ಯಾಮ್ ಭಟ್ ಪಾಲ್ಗೊಳ್ಳಲಿದ್ದಾರೆ ಎಂದು ಕೇಶವ್ ವಿವರಣೆ ಇತ್ತರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಕಿಶೋರ್ ಉಪಸ್ಥಿತರಿದ್ದರು.