ಮಡಿಕೇರಿ, ಜ. 12: ಸಂಪೂರ್ಣ ಸೃಷ್ಟಿಯ ಅವಿಭಾಜ್ಯ ಅಂಗ ಭಾರತವಾಗಿದ್ದು; ವಿಶ್ವದ ಒಳಿತಿಗಾಗಿ ಈ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರೂ ದೈವತ್ವದ ಕಡೆಗೆ ಸಾಗಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕ್ ಸು. ರಾಮಣ್ಣ ಅವರು ವಿಶ್ಲೇಷಿಸಿದರು. ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಹರಿಹರಪುರ ಪ್ರಬೋಧಿನಿ ಗುರುಕುಲದ ಅರ್ಧಮಂಡಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ಮರ್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಲಕ್ಷ್ಮಣರನ್ನು ಗುರು ವಿಶ್ವಾಮಿತ್ರರು ಭೂಮಾತೆಯ ಸಂರಕ್ಷಣೆಗಾಗಿ ಅಸುರಿ ಕುಲದ ನಾಶಕ್ಕೆ ಅಣಿಗೊಳಿಸಿದಂತೆ; ಎಲ್ಲ ಕಾಲಕ್ಕೂ ಭಾರತದ ಗುರುಪರಂಪರೆ ತಮ್ಮ ಶಿಷ್ಯಕೋಟಿಯನ್ನು ವಿಶ್ವದ ಕಲ್ಯಾಣಕ್ಕಾಗಿ ಸಂಸ್ಕಾರದೊಂದಿಗೆ ಶಿಕ್ಷಣ ಬೋಧಿಸುತ್ತಿದ್ದುದ್ದಾಗಿ ಅವರು ನೆನಪಿಸಿದರು. ಮೊದಲ ಪುಟದಿಂದ) ಮನುಷ್ಯನ ಜೀವನಕ್ಕೆ ಒಂದು ಗುರಿ ಇರಬೇಕು; ಅದು ಸ್ವಾರ್ಥ ರಹಿತವಾಗಿ ಲೋಕಹಿತದೆಡೆಗೆ ರೂಪುಗೊಳ್ಳ ಬೇಕೆಂದು ಅವರು ಮೆಲುಕು ಹಾಕಿದರು. ಭಾರತವು ಸಾಮ್ರಾಜ್ಯಶಾಹಿ ರಾಷ್ಟ್ರವಾಗಿರದೆ ಲೋಕಹಿತದೊಂದಿಗೆ ವಿಶ್ವದ ಕಲ್ಯಾಣಕ್ಕಾಗಿ ಕೌಟುಂಬಿಕ ಬದುಕಿನ ಪಾಠವನ್ನು ಪ್ರತಿಯೊಬ್ಬರಿಗೂ ಕಲಿಸುವಂತದ್ದು ಎಂದು ನೆನಪಿಸಿದ ಅವರು; ಕುಟುಂಬದಿಂದ ಸಮಾಜ, ಗ್ರಾಮ, ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ವಿಶ್ವದ ಅವಿಭಾಜ್ಯ ಅಂಗವಾಗಿ ವ್ಯಕ್ತಿತ್ವ ವಿಕಸನಗೊಳ್ಳುತ್ತಾ; ಮಾನವರು ದೇವಮಾನವರಾಗಿ ಸ್ವಾಮಿ ವಿವೇಕಾ ನಂದರಂತೆ ವಿವಾದವಿಲ್ಲದ ಗುರುವಾಗಿ ಪರಿವರ್ತನೆ ಗೊ¼ À್ಳಬೇಕೆಂದು ಸು. ರಾಮಣ್ಣ ಬೊಟ್ಟು ಮಾಡಿದರು.

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರ ಮೂಲಕ ತಮ್ಮ ಸಂಶಯವನ್ನು ನಿವಾರಿಸಿ ಕೊಂಡು ಭಗವಂತನ ಸಾಕ್ಷತ್ಕಾರ ದೊಂದಿಗೆ ವಿಶ್ವಕ್ಕೆ ಭಾರತದ ಗುರುಪರಂಪರೆಯ ಪ್ರತಿನಿಧಿಯಾಗಿ ಮಾರ್ಗದರ್ಶನ ನೀಡಿದ್ದು; ಎಲ್ಲ ಕಾಲಕ್ಕೂ ಅವಿಷ್ಮರಣಿಯ ಎಂದು ಅವರು ನೆನಪಿಸುತ್ತಾ; ಇಂತಹ ಪರಂಪರೆಯನ್ನು ಉಳಿಸುವ ದಿಸೆಯಲ್ಲಿ ಸಂಘವು ಗುರುಕುಲದ ಶಿಕ್ಷಣ ಪದ್ಧತಿಯನ್ನು ಮುಂದುವರೆಸಿದೆ ಎಂದು ಪ್ರಬೋಧಿನಿ ಹಾಗೂ ಮೈತ್ರೇಯಿ ಗುರುಕುಲಗಳನ್ನು ಉದಾಹರಿಸಿದರು. ಭಾರತವು ಗೀತೆ, ಗಂಗೆ, ಗೋವು, ತುಳಸಿ, ಸೂರ್ಯ, ಚಂದ್ರ ಹೀಗೆ ಪ್ರತಿಯೊಂದರಲ್ಲೂ ಭಕ್ತಿಯನ್ನು ಕಂಡುಕೊಂಡಿರುವದಾಗಿ ವಿವರಿಸಿದ ರಾಮಣ್ಣ ಗುರುಕುಲ ಸಂಪರ್ಕದೊಂದಿಗೆ ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.

ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಬಿ.ಎಂ. ಸರಸ್ವತಿ, ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಡಾ. ರಾಮಚಂದ್ರಕಾಮತ್ ಅವರುಗಳು ಮಾತನಾಡಿದರು. ಗುರುಕುಲದ ಆಡಳಿತ ನಿರ್ದೇಶಕ ಉಮೇಶ್ ಸಂಸ್ಥೆಯು ನಡೆದು ಬಂದ ಕುರಿತು ವಿವರಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಸಂಘದ ಪ್ರಮುಖರು, ವಿವಿಧ ಮುಖಂಡರು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂತಶ್ರೇಷ್ಠ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ಪರಂಧಾಮ ಕುರಿತು ಸಂಸ್ಮರಣೆಗೈಯಲಾಯಿತು. ಶಿವಾಜಿ ಸ್ವಾಗತಿಸಿ, ಕೆ.ಕೆ. ಮಹೇಶ್‍ಕುಮಾರ್ ನಿರೂಪಿಸಿದರು. ಚಂದ್ರ ಉಡೋತ್ ವಂದಿಸಿದರು.