ಕುಶಾಲನಗರ, ಜ. 12: ಇಲ್ಲಿಗೆ ಸಮೀಪದ ಸರಕಾರಿ ಮಾದರಿ ಫ್ರಾಥಮಿಕ ಶಾಲೆಯಲ್ಲಿ ಸುಂಟಿಕೊಪ್ಪದ ಜೆ.ಸಿ.ಐ. ಸಂಸ್ಥೆಯ ವತಿಯಿಂದ 5, 6 ಮತ್ತು 7ನೇ ತರಗತಿಯ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಹೆಚ್.ಎಂ. ವೆಂಕಟೇಶ ವಹಿಸಿದ್ದರು. ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆಯ ಅಧ್ಯಕ್ಷ ರಮೇಶ್ ಮತ್ತು ಜೆಸಿಐ ನ ವಲಯ ತರಬೇತು ದಾರರಾದ ಡೇನಿಸ್ ಡಿಸೋಜ ಮತ್ತು ಶಾಲಾ ಹಿರಿಯ ಶಿಕ್ಷಕಿ ಮೀನಾಕ್ಷಿ, ಸಿ.ಎಸ್. ಜಾನಕಿ, ಸಿ.ಎಂ. ಬಬಿತಾ. ಎಚ್.ಬಿ. ಪುಷ್ಪಾವತಿ, ನೀಲಾಂಬಿಕೆ ಮತ್ತು ಡಯಟ್ ವತಿಯಿಂದ ಆಗಮಿಸಿದ್ದ ತರಬೇತಿ ಶಿಕ್ಷಕಿಯರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕಿ ಬಬಿತಾ ನಿರೂಪಿಸಿ, ಪುಷ್ಪಾವತಿ ಸ್ವಾಗತಿಸಿದರು. ಶಿಕ್ಷಕ ರಮೇಶ್ ವಂದಿಸಿದರು.