ಗೋಣಿಕೊಪ್ಪ ವರದಿ, ಜ. 12: ಪೊನ್ನಂಪೇಟೆ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದಾಜೀ ಅಧ್ಯಕ್ಷತೆ ಯಲ್ಲಿ ರಾಮಕೃಷ್ಣ ಶಾರಾದಾಶ್ರಮದಲ್ಲಿ ರಾಷ್ಟ್ರೀಯ ಯುವದಿನಾಚರಣೆ ಆಚರಿಸಲಾಯಿತು.

ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಗೋಪಾಲನ್ ಜಗದೀಶ್, ಮನುಷ್ಯ ಬದುಕು ಸಾಗಿಸುವದ ರೊಂದಿಗೆ ಉತ್ತಮವಾಗಿ ಬಾಳುವು ದನ್ನು ಕಲಿತುಕೊಳ್ಳಬೇಕು. ಬದುಕು ಹಾಗು ಬಾಳು ಇವುಗಳು ನಡುವಿನ ವ್ಯತ್ಯಾಸವನ್ನು ಅರಿತುಕೊಂಡರೆ ಮಾತ್ರ ಇತರರಿಗೆ ಮಾದರಿಯಾಗಬಹುದು ಎಂದರು.

ಮಡಿಕೇರಿ ತಾಲೂಕು ಡಿಡಿಪಿಯುಇ ಭವಾನಿ ಮಾತನಾಡಿ ಇಂದಿನ ವಿದ್ಯಾರ್ಥಿ ಜೀವನ ಪೈಪೋಟಿಯಿಂದ ಕೂಡಿದ ಜೀವನವಾಗಿದೆ. ಶೈಕ್ಷಣಿಕವಾಗಿ ಗಳಿಸುವ ಅಂಕಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.

ಆಶ್ರಮದಲ್ಲಿ ಕಂಪ್ಯೂಟರ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಮೂಲಕ ಗಮನಸೆಳೆದರು. ಶ್ರೀ ಇಷ್ಟ ಸೇವನಂದಾಜಿ ಅವರು ವೇದಮಂತ್ರ ಪಠನೆ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಆಶ್ರಮದ ವತಿಯಿಂದ ಹೊಲಿಗೆ ತರಬೇತಿ ಪಡೆದ 47 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಪರಹಿತಾನಂದಾಜೀ ಸ್ವದೇಶಿ ಮಂತ್ರ ಪಠಿಸಿದರು.

ಮೆರವಣಿಗೆ: ಮೆರವಣಿಗೆಯಲ್ಲಿ ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಡೊಳ್ಳುಕುಣಿತ ಮೆರವಣಿಗೆಯ ಆಕರ್ಷಣೆಯಾಗಿತ್ತು. ಸ್ವಾಮಿ ವಿವೇಕಾನಂದರ ಭಾವ ಚಿತ್ರವನ್ನು ಮೆರವಣಿಗೆ ಮೂಲಕ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಆಶ್ರಮಕ್ಕೆ ತರಲಾಯಿತು. ಪೊನ್ನಂಪೇಟೆ ಉಪನಿರೀಕ್ಷಕ ಕಮಾರ್ ಬಾವುಟ ಬೀಸುವ ಮೂಲಕ ಮೆರಣಿಗೆಗೆ ಚಾಲನೆ ನೀಡಿದರು. -ಸುದ್ದಿಮನೆ