ಸುಂಟಿಕೊಪ್ಪ, ಜ. 12: ಖಾಸಗಿ ತೋಟದಲ್ಲಿರುವ ಪುರಾತತ್ವ ಇಲಾಖೆಗೆ ಸೇರಿದ ಜೈನ ಬಸದಿಯನ್ನು ವೀಕ್ಷಿಸಲು ಬಂದ ಇತಿಹಾಸ ಉಪನ್ಯಾಸಕರಿಗೆ ಈ ತೋಟದ ಸಿಬ್ಬಂದಿ ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಶನಿವಾರ ಸಂಜೆ 4 ಗಂಟೆಯ ಸುಮಾರಿಗೆ ಚಿಕ್ಕಅಳುವಾರ ವಿಶ್ವ ವಿದ್ಯಾನಿಲಯ ಹಾಗೂ ಸೋಮವಾರಪೇಟೆ ಕಾಲೇಜೊಂದರ ಇತಿಹಾಸ ಉಪನ್ಯಾಸಕರಿಬ್ಬರೂ ಈ ಬಸದಿಯನ್ನು ವೀಕ್ಷಿಸಲು ಆಗಮಿಸಿದ್ದರು. ತೋಟದೊಳಗೆ ಇರುವ ಕಾರಣಕ್ಕೆ ಸರ್ಕಾರದ ಅಧೀನದಲ್ಲಿರುವ ಈ ಹಳೆಯ ಬಸದಿಯನ್ನು ವೀಕ್ಷಿಸಿ ಮುಂದಿನ ವಾರ ವಿದ್ಯಾರ್ಥಿಗಳನ್ನು ಕರೆ ತರುವುದಾಗಿ, ಅದಕ್ಕಾಗಿ ಬಸದಿಯನ್ನು ವೀಕ್ಷಿಸಲು ಬಂದಿದ್ದೇವೆ ಎಂದು ಅನುಮತಿ ಕೇಳಿದಾಗ ಕಚೇರಿ ಸಿಬ್ಬಂದಿ ಬಸದಿ ವೀಕ್ಷಿಸಲು ಅವಕಾಶ ನೀಡಲಿಲ್ಲ. ತೋಟದ ಮಾಲೀಕರು ಅನುಮತಿ ನೀಡಿದ್ದಾರೆ ಎಂದು ಹೇಳಿದರೂ ಸಿಬ್ಬಂದಿ ನಿರಾಕರಿಸಿದರು ಎಂದು ತಿಳಿದು ಬಂದಿದೆ.