ಮಡಿಕೇರಿ, ಜ. 13: 7ನೇ ಹೊಸಕೋಟೆ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿದಾನದಲ್ಲಿ ವರ್ಷಂಪ್ರತಿ ನಡೆಸುತ್ತಿ ರುವ ಮಕರ ಸಂಕ್ರಾಂತಿ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ತಾ. 15 ರಂದು ಸಂಜೆ 6 ಗಂಟೆಗೆ ನಡೆಸಲು ಆಡಳಿತ ಮಂಡಳಿ ಅಧ್ಯಕ್ಷ ದಾಸಂಡ ರಮೇಶ್‍ಚಂಗಪ್ಪ ಮತ್ತು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ. ಮಹಾಮಂಗಳಾರತಿಯ ನಂತರ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ.