ಗೋಣಿಕೊಪ್ಪಲು, ಜ. 12: ಮೈಸೂರಿನ ಆರ್.ಟಿ. ನಗರದಲ್ಲಿ ಆಯೋಜಿತ ಜಿಲ್ಲಾ ರೋಟರಿ ಸಮ್ಮೇಳನದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ತಂಡಕ್ಕೆ ಪಥಸಂಚಲನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರಕಿದೆ. ಅಂತೆಯೇ ಭಾರತದಲ್ಲಿ ರೋಟರಿ ಸ್ಥಾಪನೆಯಾಗಿ 100 ವರ್ಷ ಕಳೆದ ಹಿನ್ನೆಲೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ರೋಟರಿ ತಂಡದ ಸದಸ್ಯರುಗಳಾದ ಬೀಟಾ ಲಕ್ಷ್ಮಣ, ಮುತ್ತಪ್ಪ ಕೆ.ಸಿ. ಅಕ್ಕಮ್ಮ, ಅರುಣ್ ತಮ್ಮಯ್ಯ, ರಾಜೇಶ್ವರಿ, ಯಶೋಧ, ಸರಿನಾ, ಮುದ್ದಪ್ಪ ಪೂವಣ್ಣ, ಅಭಿಷೇಕ್, ಚರಿಸ್ಮಾ, ಇಂಪಾ ಸುಸ್ಮಿತಾ ಹಾಗೂ ಪವಿತ್ರ, ಕೊಡವ ಸಾಂಸ್ಕøತಿಕ ನೃತ್ಯದ ಮೂಲಕ ಗಮನ ಸೆಳೆದರು.
ಪಥ ಸಂಚಲನ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ರೋಟರಿ ಕ್ಲಬ್ ಸದಸ್ಯರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಂಡಿದ್ದರು. ಗೋಣಿಕೊಪ್ಪ ರೋಟರಿ ಅಧ್ಯಕ್ಷ ಕಾಡ್ಯಮಾಡ ನೆವೀನ್ ಮತ್ತು ಕಾರ್ಯದರ್ಶಿ ಪೂಣಚ್ಚ ತಂಡದ ನೇತೃತ್ವ ವಹಿಸಿದ್ದರು. ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿಯಾಗಿ ಸಮ್ಮೇಳನಕ್ಕೆ ಬಂದಿದ್ದ ದಮನ್ಜಿತ್ಸಿಂಗ್ ಹಾಗೂ ಜಿಲ್ಲಾ ರೋಟರಿ ರಾಜ್ಯಪಾಲ ಜೊಸೇಫ್ ಮ್ಯಾಥ್ಯು ಗೋಣಿಕೊಪ್ಪ ರೋಟರಿ ಕ್ಲಬ್ಗೆ ಬಹುಮಾನ ವಿತರಿಸಿದರು.
ರೋಟರಿ ಅಂತರ್ರಾಷ್ಟ್ರೀಯ ನಾಮನಿರ್ದೇಶಿತ ಅಧ್ಯಕ್ಷ ಶೇಖರ್ ಮೆಹ್ಸಾ ಇದ್ದರು.
ರೋಟರಿ ಜಿಲ್ಲಾ ಸಮ್ಮೇಳನದಲ್ಲಿ ಕೊಡಗು, ಮಂಗಳೂರು, ಚಾಮರಾಜನಗರ, ಮೈಸೂರು ಜಿಲ್ಲೆಗಳಿಂದ 1500ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು. ಈ ಸಮ್ಮೇಳನಕ್ಕೆ ಅತ್ಯಧಿಕ ಸದಸ್ಯರನ್ನು ನೋಂದಾಯಿಸಿದ ಹಿನ್ನಲೆಯಲ್ಲಿ ವಲಯ 6ರ ಸಹಾಯಕ ಗವರ್ನರ್ ಪಿ. ನಾಗೇಶ್ ಮತ್ತು ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಅವರನ್ನು ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಗೌರವಿಸಿದರು. ಸೋಮವಾರಪೇಟೆ ರೋಟರಿ ಕ್ಲಬ್ನ 48, ಗೋಣಿಕೊಪ್ಪಲು ರೋಟರಿಯ 28, ಮಡಿಕೇರಿ ಮಿಸ್ಟಿ ಹಿಲ್ಸ್ನ 25 ಸದಸ್ಯರೂ ಸೇರಿದಂತೆ ವಲಯ 6 ರಿಂದ 266 ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.