ಕುಶಾಲನಗರ, ಜ. 13: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ ಸಮಿತಿ, ಯುವ ರೆಡ್‍ಕ್ರಾಸ್, ರೇಂಜರ್ಸ್-ರೋವರ್ಸ್, ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ “ರಾಷ್ಟ್ರೀಯ ಯುವ ಸಪ್ತಾಹ” ಹಮ್ಮಿಕೊಳ್ಳಲಾಯಿತು.

ಸಮಾಜ ಸೇವಕ ಹೆಚ್.ಟಿ. ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಗಳು- ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಬಿ. ಲಿಂಗಮೂರ್ತಿ ವಿವೇಕಾನಂದರ ಬಗ್ಗೆ ಮಾಹಿತಿ ಒದಗಿಸಿದರು.

ಯುವ ರೆಡ್‍ಕ್ರಾಸ್ ಘಟಕದ ಸಂಚಾಲಕ ಪಿ.ರಮೇಶ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಲೇಜಿನ ಸಾಂಸ್ಕøತಿಕ ಸಮಿತಿಯ ಸಂಚಾಲಕಿ ವಸಂತಕುಮಾರಿ, ರೇಂಜರ್ಸ್- ರೋವರ್ಸ್ ಘಟಕದ ಸಂಚಾಲಕ ಡಾ. ಕೆ.ಆರ್. ಸುರೇಶ್‍ಕುಮಾರ್, ಪಿ.ಪಾವನಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ಟಿ.ಎಂ.ಸುಧಾಕರ್, ಎ.ಕೆ. ಕಾವೇರಪ್ಪ, ದೈಹಿಕ ಶಿಕ್ಷಣ ನಿರ್ದೇಶಕಿ ಐ.ಕೆ. ಪೂವಮ್ಮ ಮತ್ತು ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.