ಸುಂಟಿಕೊಪ್ಪ, ಜ. 12: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 2.50 ಲಕ್ಷ ರೂ. ಅನುದಾನದ ಚೆಕ್ ಅನ್ನು ಮಂಗಳವಾರ ಜೀರ್ಣೋದ್ಧಾರ ಸಮಿತಿಯವರಿಗೆ ಹಸ್ತಾಂತರಿಸಲಾಯಿತು.

ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ರೂ 2.50 ಲಕ್ಷ ಚೆಕ್ ಅನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವೈ.ಎಂ.ಕರುಂಬಯ್ಯ ಅವರಿಗೆ ನೀಡಿದರು.

ಈ ಸಂದರ್ಭ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಆರ್. ಸುಕುಮಾರ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಎ.ಶ್ರೀಧರ್ ಕುಮಾರ್, ಜಗದೀಶ್ ರೈ, ಕಾರ್ಯದರ್ಶಿ ಡಾ. ಶಶಿಕಾಂತ್ ರೈ, ಸಹ ಕಾರ್ಯದರ್ಶಿ ಪಟ್ಟೆಮನೆ ಉದಯ, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಸದಸ್ಯರುಗಳಾದ ಬಿ.ಎಸ್. ಅಶೋಕ್‍ಶೇಟ್, ಪಟ್ಟೆಮನೆ. ಕೆ.ಶೇಷಪ್ಪ, ರಮೇಶ್ ರೈ, ರಾಜು ರೈ, ಶಿವು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯ ಪ್ರಭಾರ ಮೇಲ್ವಿಚಾರಕಿ ನಿರ್ಮಲಾ ಪ್ರಕಾಶ್, ಸೇವಾ ಪ್ರತಿನಿಧಿಗಳಾದ ಜ್ಯೋತಿ ಲಕ್ಷ್ಮೀ, ಮಾಲಿನಿ, ಚಿತ್ರಾ ಸುರೇಶ್, ಒಕ್ಕೂಟದ ಅಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಕುಸುಮ ಸದಾಶಿವ, ಬೇಬಿ ಜಾರ್ಜ್, ಸುಂಟಿಕೊಪ್ಪ ಒಕ್ಕೂಟದ ರಮಮಣಿ ಮತ್ತಿತರರು ಇದ್ದರು.