ಗೋಣಿಕೊಪ್ಪಲು, ಜ. 12: ಗೋಣಿಕೊಪ್ಪ ಸಮೀಪದ ಹಾತೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕೈಕೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ಕೆರೆ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷÀ ಸಿ.ಕೆ. ಬೋಪಣ್ಣ ರೂ. 3.25 ಲಕ್ಷ ಅನುದಾನ ಮೀಸಲಿಟ್ಟಿದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಅನುದಾನದಲ್ಲಿ ಈ ದೇವಸ್ಥಾನದ ಕೆರೆ ಅಭಿವೃದ್ಧಿ ನಡೆಸಲಾಗುತ್ತಿದ್ದು ಕಳೆದ ಹಲವಾರು ವರ್ಷಗಳಿಂದ ಈ ಕೆರೆಯು ಹೂಳು ತುಂಬಿತ್ತು. ಇದನ್ನು ಮನಗಂಡ ಜಿ.ಪಂ. ಸದಸ್ಯ ತಮ್ಮ ಅನುದಾನವನ್ನು ಈ ಕೆರೆಯ ಅಭಿವೃದ್ಧಿಗೆ ನೀಡುವ ಮೂಲಕ ಸ್ಪಂದಿಸಿದ್ದಾರೆ. ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ದೇವಸ್ಥಾನ ಸಮಿತಿಯ ಪ್ರಮುಖರಾದ ಜಮ್ಮಡ ಲವ, ಕುಪ್ಪಂಡ ಕೃಷ್ಣ, ಆಪ್ತ ಸಹಾಯಕ ಜಪ್ಪು ಸುಬ್ಬಯ್ಯ ಮುಂತಾದವರು ಹಾಜರಿದ್ದರು.