ಮಡಿಕೇರಿ, ಜ. 13: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ವತಿಯಿಂದ ಎರಡು ದಿನಗಳ, ಕಾಫಿ ಕಾಲಾಡಿ ಸುವ ಸಾಧನ ಬಳಕೆಯ ಪ್ರಾತ್ಯಕ್ಷಿಕೆಯನ್ನು ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಯಲ್ಲಿ ಹಾಗೂ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿಯ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾಫಿಯನ್ನು ಬಿಸಿಲಿನಲ್ಲಿ ಒಣಗಿಸುವಲ್ಲಿ ಪ್ರಯೋಜನಕಾರಿಯಾದ, ಮಾನವ ಚಾಲಿತ ಈ ಉಪಕರಣವನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾ ಲಯ ಶಿವಮೊಗ್ಗದ ಹಿರಿಯೂರಿನ ಕೃಷಿ ತಾಂತ್ರಿಕ ವಿಭಾಗದವರು, ಕೊಡಗು ಜಿಲ್ಲೆಯ ಅಗ್ರಿಕಲ್ಚರಲ್ ಸೈಂಟಿಸ್ಟ್ ಫೋರಂ (ಂSಈಏ) ಇವರ ಸಹಯೋಗದಲ್ಲಿ ಅಭಿವೃದ್ದಿಪಡಿಸಿದ್ದು ಇದರ ಬಳಕೆಯ ಕುರಿತು ಕೊಡಗಿನ ವಿವಿಧ ಪ್ರದೇಶಗಳಿಂದ ಬಂದ ಕಾಫಿ ಬೆಳೆಗಾರರು ಮಾಹಿತಿ ಪಡೆದು ಕೊಂಡರು. ಪ್ರಾತ್ಯಕ್ಷಿಕೆಯನ್ನು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ ಜಿ ಕುಶಾಲಪ್ಪನವರು ಉದ್ಘಾಟಿಸಿದರು. ಅಗ್ರಿಕಲ್ಚರಲ್ ಸೈಂಟಿಸ್ಟ್ ಫೋರಂನ ಅಧ್ಯಕ್ಷ ಡಾ.ಸುಬ್ರಮಣಿ ಮತ್ತು ಉಪಾಧ್ಯಕ್ಷ, ಪ್ರೊಫೆಸರ್ ಜಿ.ಎಂ. ದೇವಗಿರಿ ಯವರು ಹಾಜರಿದ್ದರು.

ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ತ ಡಾ. ಆರ್.ಎನ್. ಕೆಂಚರೆಡ್ಡಿಯವರು ಕಾಫಿಯನ್ನು ಬಿಸಿಲಿನಲ್ಲಿ ಒಣಗಿಸುವಾಗ ಆಗಿಂದಾಗ್ಗೆ ಕಾಲಾಡಿಸುವಾಗ ಬೇಕಾಗುವ ಸಮಯವನ್ನು ಈ ಉಪಕರಣವು ಕಡಿಮೆಗೊಳಿಸುತ್ತದೆ, ಮೂರುಜನ ನಿರ್ವಹಿಸಬೇಕಾದ ಕಾರ್ಯವನ್ನು ಒಬ್ಬರೇ ಈ ಉಪಕರಣದ ಸಹಾಯದಿಂದ ನಿರ್ವಹಿಸಬಹುದು. ಒಬ್ಬ ಮನುಷ್ಯ ಒಂದು ದಿನದಲ್ಲಿ 80,000 ಚದರ ಅಡಿಯಲ್ಲಿ ಒಣಗಿಸಲು ಹಾಕಿರುವ ಕಾಫಿಯನ್ನು ಕಾಲಾಡಿಸಲು ಸಾಧ್ಯವಿದ್ದು ಈ ಉಪಕರಣದ ಬಳಕೆಯಿಂದ ಅದೇ ಮನುಷ್ಯ ಸುಮಾರು 3,24.000 ಚದರ ಅಡಿಯಷ್ಟು ಪ್ರದೇಶವನ್ನು ಕಾಲಾಡಿಸಬಹುದು. ಇದು ಸಮಯದ ಉಳಿತಾಯವಲ್ಲದೆ, ಕೆಲಸವನ್ನು ಹಗುರಗೊಳಿಸುತ್ತದೆ ಮತ್ತು ಬೆಲೆಯೂ ಕಡಿಮೆ, ವಿಶ್ವವಿದ್ಯಾಲಯದಿಂದ ಬೆಳೆಗಾರರ ಬೇಡಿಕೆಯ ಮೇರೆಗೆ ಉಪಕರಣ ಗಳನ್ನು ತಯಾರಿಸಿ ಕೊಡಲಾಗುತ್ತದೆ, ಪ್ರಸ್ತುತ ಈ ಉಪಕರಣವನ್ನು, ಎ.ಎಸ್.ಎಫ್.ಕೆಯ ದೇವಣಿರ ಕುಮಾರ್, ಹಾಕತ್ತೂರು ಇವರಲ್ಲಿ ವೀಕ್ಷಣೆಗೆ ಇರಿಸಲಾಗಿದೆ ಎಂದು ತಿಳಿಸಿದರು. ಕಾಫಿ ರೇಕರ್ ಅಲ್ಲದೇ, ಕಾಫಿ ಹೀಪರ್ (ರಾಶಿ ಮಾಡುವ) ಯಂತ್ರವನ್ನು ಸಹ ವಿಶ್ವವಿದ್ಯಾಲ ಯದಿಂದ ಅಭಿವೃದ್ದಿ ಪಡಿಸಿದ್ದು, ಶೀಘ್ರವೇ ಅದನ್ನು ಸಹ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.