ಕುಶಾಲನಗರ, ಜ. 12: ಕುಶಾಲನಗರ ಕಾವೇರಿ ಕಲಾ ಪರಿಷತ್ ಆಶ್ರಯದಲ್ಲಿ 16ನೇ ವರ್ಷ ಕಲಾ ವೈಭವ ಕಾರ್ಯಕ್ರಮ ಕುಶಾಲನಗರದ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆಯಿತು.
ಪತ್ರಕರ್ತರಾದ ಡಾ.ಬಿ.ಎ. ನಂಜಪ್ಪ ಅವರು 16ನೇ ವರ್ಷದ ಕಲಾವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಮೂಲಸಂಸ್ಕøತಿಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಕಲೆಗೆ ಹೆಚ್ಚು ಒತ್ತು ನೀಡುವುದ ರೊಂದಿಗೆ ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಆಕಾಶವಾಣಿಯ ಕಲಾವಿದ ಬಿ.ಎ. ಗಣೇಶ್ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮೂಲಕ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಭಾರತೀಯ ಸಂಗೀತ, ನೃತ್ಯ, ಚಿತ್ರಕಲೆ, ಯೋಗ, ಹಾಡುಗಾರಿಕೆ, ವಾದ್ಯಸಂಗೀತ, ಕರಾಟೆ ಮತ್ತಿತರ ಕಾರ್ಯಕ್ರಮಗಳು ನಡೆದವು.
ಕಾವೇರಿ ಕಲಾ ಪರಿಷತ್ ಅಧ್ಯಕ್ಷರಾದ ಕೆ.ಜೆ.ಸತೀಶ್ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಪಂ ಸದಸ್ಯರಾದ ಬಿ. ಅಮೃತ್‍ರಾಜ್, ಪರಿಷತ್ ಪ್ರಮುಖರಾದ ಕೆ.ಸಿ. ನಂಜುಂಡಸ್ವಾಮಿ, ಆಶಾ ಅಶೋಕ್, ಬಿ.ಆರ್. ಜನಾರ್ಧನ, ಬಿ.ಎಲ್. ಸತೀಶ್, ಕೆ.ಎಸ್. ರಾಜಶೇಖರ್, ಕೆ.ಕೆ. ದಿನೇಶ್ ಕುಮಾರ್, ಇಂದಿರಾ ತಿಮ್ಮಪ್ಪ, ಉಮಾ ಪ್ರಭಾಕರ್, ವಿ.ಡಿ. ಪುಂಡರೀಕಾಕ್ಷ, ಕೆ.ಆರ್. ರವಿಕುಮಾರ್, ವ್ಯವಸ್ಥಾಪಕರಾದ ಟಿ.ಕೆ. ಯಶೋಧ ಮತ್ತು ನೃತ್ಯ, ಸಂಗೀತ ಶಿಕ್ಷಕ, ಶಿಕ್ಷಕಿಯರು ಇದ್ದರು.