ಮಡಿಕೇರಿ, ಜ. 11: ದೇಶವನ್ನು ಕಟ್ಟಬೇಕಾದ ಮಹತ್ತರ ಜವಾಬ್ದಾರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಜಾತಿ ಧರ್ಮಗಳ ನಡುವೆ ಸಿಎಎ-ಎನ್ಆರ್ಸಿಯಂತಹ ಕಾಯ್ದೆಗಳ ಮೂಲಕ ಕಂದಕ ಸೃಷ್ಟಿಸಿ ಈ ದೇಶವನ್ನು ಕೆಡವುವ ಪ್ರಯತ್ನಕ್ಕೆ ಮುಂದಾಗಿದ್ದು, ಇದೊಂದು ದುರಂತ ಎಂದು ಹಿರಿಯ ಸಾಹಿತಿ ದೇವನೂರು ಮಹದೇವ ಹೇಳಿದರು.ಕೇಂದ್ರ ಸರಕಾರದ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ವಿರುದ್ಧ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ನಗರದ ಗಾಂಧಿ ಮೈದಾನದ ಎ.ಕೆ. ಸುಬ್ಬಯ್ಯ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನಾಂದೋಲನ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ನಮ್ಮಿಂದಲೇ ಮತ ಪಡೆದು ಪ್ರಧಾನಿ ಸ್ಥಾನ ಅಲಂಕರಿಸಿರುವ ಮೋದಿಯವರು ನಮ್ಮ ಪೌರತ್ವವನ್ನೇ ಸಾಬೀತು ಮಾಡಿ ಎಂದು ಕೇಳುತ್ತಿರುವುದು ವಿಪರ್ಯಾಸ. ಸಂವಿಧಾನಕ್ಕೆ ನಮಿಸಿ ಲೋಕಸಭೆ ಪ್ರವೇಶಿಸಿದ್ದ