ಮಡಿಕೇರಿ, ಜ. 11: ಮಡಿಕೇರಿ-ಮಂಗಳೂರು ರಸ್ತೆಯ ಕೊಯನಾಡು ಬಳಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ನಲ್ಲಿ ತೆರಳುತ್ತಿದ್ದ ಉತ್ತರ ಭಾರತ ಮೂಲದ ಪ್ರವಾಸಿಗರಿಬ್ಬರು ಸ್ಥಳದಲ್ಲೆ ದುರ್ಮರಣಗೊಂಡಿರುವ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಪಶ್ಚಿಮ ಬಂಗಾಳದ ಅರ್ಣಬ್ (30) ಮಡಿಕೇರಿ, ಜ. 11: ಮಡಿಕೇರಿ-ಮಂಗಳೂರು ರಸ್ತೆಯ ಕೊಯನಾಡು ಬಳಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ನಲ್ಲಿ ತೆರಳುತ್ತಿದ್ದ ಉತ್ತರ ಭಾರತ ಮೂಲದ ಪ್ರವಾಸಿಗರಿಬ್ಬರು ಸ್ಥಳದಲ್ಲೆ ದುರ್ಮರಣಗೊಂಡಿರುವ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಪಶ್ಚಿಮ ಬಂಗಾಳದ ಅರ್ಣಬ್ (30) ಮಡಿಕೇರಿಗೆ ಮೈಸೂರು ಮಾರ್ಗವಾಗಿ ಬರಬೇಕಾಗಿದ್ದು ದಾರಿ ತಪ್ಪಿ ಹಾಸನ- ಸಕಲೇಶಪುರ ಮಾರ್ಗದಿಂದ ಪ್ರಯಾಣಿಸಿ ಮಂಗಳೂರು- ಮಡಿಕೇರಿ ರಸ್ತೆ ಸೇರಿ ರಾತ್ರಿ ಇಡೀ ಪ್ರಯಾಣಿಸಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡ ಬೈಕ್ ಸವಾರರು ಸ್ಥಳದಲ್ಲೆ ಅಸುನೀಗಿದ್ದಾರೆ. ಪೊಲೀಸ್ ಮೂಲದ ಪ್ರಕಾರ ಮಂಗಳೂರಿಗೆ ತೆರಳುತ್ತಿದ್ದ ಬಸ್, ರಸ್ತೆಯ ಎಡಭಾಗದಲ್ಲಿ ಬಾಗಿದ್ದ ಮರದ ಕೊಂಬೆಯನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದ ಸಂದರ್ಭ ಎದುರಿನಿಂದ
(ಮೊದಲ ಪುಟದಿಂದ) ವೇಗವಾಗಿ ಬರುತ್ತಿದ್ದ ಬೈಕ್ಗೆ ಅಪ್ಪಳಿಸಿದೆ. ಮೃತರಿಬ್ಬರೂ ಬೆಂಗಳೂರಿನ ‘ಬ್ಯಾಂಕ್ ಆಫ್ ಬರೋಡ’ದ ಉದ್ಯೋಗಿಗಳಾಗಿದ್ದರು. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮೃತದೇಹ ಕೊಂಡೊಯ್ಯಲು ಆಗಮಿಸಲಿದ್ದಾರೆ. ಬಸ್ ಚಾಲಕ ಪ್ರದೀಪ್ ರಾಥೋಡ್ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.