ಮಡಿಕೇರಿ, ಜ. 11: ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಅತಿಥಿ ವೃಕ್ಷ ಶಿಕ್ಷಣವು ಹೊಟೇಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ಉಚಿತ ತರಬೇತಿಯನ್ನು ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉಚಿತವಾಗಿ ಹೊಟೇಲ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಫುಡ್ ಪ್ರೊಡಕ್ಷನ್/ ಆಹಾರ ತಯಾರಿಕೆ 18 ವಾರಗಳು, ಬೇಕರಿ ಅಂಡ್ ಕನ್‍ಫೆಕ್ಷನರಿ/ ಬೇಕರಿ ಪದಾರ್ಥಗಳ ತಯಾರಿಕೆ 6 ವಾರ, ಫುಡ್ ಅಂಡ್ ಬೆವರೇಜ್ ಸರ್ವೀಸ್/ ಆಹಾರ ಮತ್ತು ಪಾನೀಯ ಸೇವೆ ಒಂದು ವರ್ಷ, ಫ್ರೆಂಟ್ ಆಫೀಸ್/ಕಚೇರಿ ನಿರ್ವಹಣೆ 14 ವಾರ, ಹೌಸ್ ಕೀಪಿಂಗ್/ಮನೆ ನಿರ್ವಹಣೆ 12 ವಾರಗಳು. 18 ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ.

ತರಬೇತಿಯ ವಿಶೇಷತೆಗಳು: ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಮತ್ತು ಪ್ರತಿಷ್ಠಿತ ಹೊಟೇಲ್‍ಗಳಲ್ಲಿ ಕೆಲಸ ಪಡೆಯಲು ಸಹಾಯ ಮಾಡಲಾಗುವುದು. ತರಬೇತಿ ನೀಡುವ ಸ್ಥಳ: ವನದೀಪ್ ಕ್ರಿಸ್ಟಲ್ ಕೋರ್ಟ್‍ನ ಮುಂಭಾಗ. ಮಡಿಕೇರಿ ದೂ. 9353530458, 9353530686.