ಶನಿವಾರಸಂತೆ, ಜ. 10: ಶನಿವಾರಸಂತೆ ಸಮೀಪದ ಸೀಗೆಹೊಸೂರು ಗ್ರಾಮದ ನಿವಾಸಿ ಎಸ್.ಬಿ. ನಾಗರಾಜು (60) ಎಂಬವರು ಇಂದು ಬೆಳಿಗ್ಗೆ ತಮ್ಮ ಮನೆಯ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ಹೊರೆ ಕಟ್ಟುವ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಬಾಧೆ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.

ಕೃಷಿಕರಾಗಿದ್ದ ನಾಗರಾಜು ಧರ್ಮಸ್ಥಳ ಸಂಘ, ಎಸ್.ಕೆ.ಎಸ್. ಸಂಘ ಹಾಗೂ ವಿ.ಎಸ್.ಎಸ್. ಎನ್.ನಲ್ಲಿ ಸಾಲವಿದ್ದು, ಸಾಲ ತೀರಿಸಲು ತುಂಬಾ ಕಷ್ಟವಾಗುತ್ತಿದೆ ಎಂದು ಕೊರಗುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಎಸ್.ಬಿ. ಚಂದ್ರು ದೂರು ನೀಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆ ಹೆಡ್‍ಕಾನ್ ್ಸಟೇಬಲ್ ಬೋಪಣ್ಣ ಪ್ರಕರಣ ದಾಖಲಿಸಿದ್ದಾರೆ.