ಶ್ರೀಮಂಗಲ, ಜ. 10: ಕೊಡಗು ಬಾಕ್ಸಿಂಗ್ ಅಸೋಷಿಯೇಸನ್ ಆಶ್ರಯದಲ್ಲಿ ತಾ. 12 ರಂದು (ನಾಳೆ) ಪೊನ್ನಂಪೇಟೆಯಲ್ಲಿ ಜಿಲ್ಲಾ ಬಾಕ್ಸಿಂಗ್ ಟೂರ್ನಮೆಂಟ್ ಆಯೋಜಿಸಲಾಗಿದೆ.ಪೊನ್ನಂಪೇಟೆಯ ಕಾನೂರು ರಸ್ತೆ ಚಿಕ್ಕಮುಂಡೂರು ಗ್ರಾಮದ ಅಪ್ಪಚ್ಚಕವಿ ವಿದ್ಯಾಲಯ ಕ್ಯಾಂಪಸ್‍ನಲ್ಲಿ ಅಪರಾಹ್ನ 2 ಗಂಟೆಗೆ (ಮೊದಲ ಪುಟದಿಂದ) ಟೂರ್ನಮೆಂಟ್ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಕರ್ನಾಟಕ ಅಮೇಚೂರ್ ಬಾಕ್ಸಿಂಗ್ ಅಸೋಷಿಯೇಸನ್‍ನ ಅಧ್ಯಕ್ಷ ನಿವೃತ್ತ ಸೇನಾಧಿಕಾರಿ ಸಿ.ಸಿ.ಮಾಚಯ್ಯ, ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಷಿಯೇಸನ್‍ನ ಅಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಭಾಗವಹಿಸಲಿದ್ದು, ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಝರುಗಣಪತಿ ಮತ್ತು ಕೂರ್ಗ್ ವೇಲ್‍ನೆಸ್ ಪೌಂಡೇಷನ್‍ನ ಸ್ಥಾಪಕಿ ನಿಕ್ಕಿಪೊನ್ನಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಬಾಕ್ಸಿಂಗ್ ಅಸೋಷಿಯೇಸನ್‍ನ ಕಾರ್ಯದರ್ಶಿ ಕರ್ನಲ್ ಚೆಪ್ಪುಡೀರ ಪಿ.ಮುತ್ತಣ್ಣ ತಿಳಿಸಿದ್ದಾರೆ.ನಾಳೆ ಬಾಕ್ಸಿಂಗ್ ಟೂರ್ನಮೆಂಟ್