ಮಡಿಕೇರಿ, ಜ.10 : ಚೆಟ್ಟಳ್ಳಿ ಕಾಫಿ ಮಂಡಳಿ ಇವರ ವತಿಯಿಂದ ತಾ. 13 ರಂದು ಬೆಳಿಗ್ಗೆ 10 ಗಂಟೆಯಿಂದ ನಾಪೋಕ್ಲು ಹಳೇ ತಾಲೂಕಿನ ಭಗವತಿ ದೇವಸ್ಥಾನದ ಸಮುದಾಯ ಭವನದಲ್ಲಿ ಮಣ್ಣು ಪರೀಕ್ಷೆ ಮಾಡಿಕೊಡಲಾಗುತ್ತಿದ್ದು, ರಸಸಾರ ತಿಳಿಯಲು ರೂ.25 ಮತ್ತು ಪೋಷಕಾಂಶಗಳ ವಿಶ್ಲೇಷಣೆಗೆ ರೂ.255 ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ಈ ಅವಕಾಶವನ್ನು ನಾಪೋಕ್ಲು ಸುತ್ತಮುತ್ತಲಿನ ಎಲ್ಲಾ ರೈತರು ಸದುಪಯೋಗ ಪಡೆದುಕೊಳ್ಳುವಂತೆ ಮಡಿಕೇರಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.