ಗೋಣಿಕೊಪ್ಪ ವರದಿ, ಜ, 9: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಜನವರಿ 10 ರಿಂದ ನಡೆಸಲು ನಿಗದಿಯಾಗಿದ್ದ ಮಹಿಳಾ ಹಾಕಿ ಟೂರ್ನಿಯನ್ನು ಫೆಬ್ರವರಿ ತಿಂಗಳಿಗೆ ಮುಂದೂಡಲಾಗಿದೆ. ಜಿಲ್ಲೆಯ ಆಟಗಾರರು ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಪಿಯು ಯೂನಿವರ್ಸಿಟಿ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಪ್ರತಿನಿಧಿಸುತ್ತಿರುವುದರಿಂದ ಆಟಗಾರರ ಅಲಭ್ಯದಿಂದ ಮುಂದೂಡಲಾಗಿದೆ. ಫೆ. 10 ರಿಂದ ಪಂದ್ಯಗಳು ನಡೆಯಲಿದೆ ಎಂದು ಹಾಕಿಕೂರ್ಗ್ ಪ್ರಕಟಣೆ ತಿಳಿಸಿದೆ.