ವೀರಾಜಪೇಟೆ, ಜ. 9: ಕರ್ನಾಟಕ ಸ್ಪೋಟ್ರ್ಸ್ ಡ್ಯಾನ್ಸ್ ಅಸೋಶಿಯೇಶನ್ ವತಿಯಿಂದ ಈಚೆಗೆ ಪಿರಿಯಾಪಟ್ಟಣದ ಸಾಯ ಸಮುದಾಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಬಿ.ಎಸ್.ಶಿಲ್ಪ ಚಿನ್ನದ ಪದಕ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈಕೆಯ ಸಹೋದರಿ ಇಲ್ಲಿನ ಬ್ರೈಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಬಿ.ಎಸ್.ಸಂಜನಾ ಬೆಳ್ಳಿಯ ಪದಕ ಪಡೆದಿದ್ದಾಳೆ.
ಈ ಇಬ್ಬರು ಅಮ್ಮತ್ತಿ ಒಂಟಿಯಂಗಡಿಯ ಶಿವಪ್ಪ ರಶ್ಮಿ ದಂಪತಿಯ ಪುತ್ರಿಯರಾಗಿದ್ದು ಇಲ್ಲಿನ ನಾಟ್ಯ ಮಯೂರಿ ಶಾಲೆಯ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆಯಂದಿರು.