ಮಡಿಕೇರಿ, ಜ. 9: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾ. 15 ರಂದು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದ ಮುಂಭಾಗದ ಬಯಲು ಪ್ರದೇಶದಲ್ಲಿ ಶ್ರೀ ಗಣಪತಿ ಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶತರುದ್ರಾಭಿಷೇಕ ಪಠಣ ಕಾರ್ಯವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 7 ರಿಂದ ಪೂಜಾ ಕೈಂಕರ್ಯ ಪ್ರಾರಂಭವಾಗಲಿದೆ. ಕೊಡವರು ಮತ್ತು ಅಮ್ಮಕೊಡವ ಜನಾಂಗಕ್ಕೆ ಅಗಸ್ತ್ಯರ ಶಾಪವಿದ್ದು; ಇದರ ವಿಮೋಚನೆಗೆಂದು ಟ್ರಸ್ಟ್ ವತಿಯಿಂದ 2014ರಲ್ಲಿ ಯಜುಃ ಸಂಹಿತಾ ಯಾಗ ಹಾಗೂ ಚಂಡಿಕಾಯಾಗವನ್ನು ನಡೆಸಲಾಗಿದ್ದು; ಅಲ್ಲಿಂದ ವರ್ಷಂಪ್ರತಿ ಇದೇ ಸ್ಥಳದಲ್ಲಿ ಈ ಕೈಂಕರ್ಯ ನಡೆಸಲಾಗುತ್ತಿದೆ ಎಂದು ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.