ಗೋಣಿಕೊಪ್ಪಲು, ಜ.9: ಕೊನೆಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಅನ್ನದಾತನ ಗೋಳಿಗೆ ಸ್ಪಂದಿಸುವ ಮೂಲಕ ರೈತರ ಸಂಕಷ್ಟದಲ್ಲಿ ಭಾಗಿಯಾಗಿದ್ದಾರೆ. ಅನ್ನದಾತ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ದ.ಕೊಡಗಿನ ಭತ್ತ ಬೆಳೆಯುವ ರೈತನ ಗದ್ದೆಗಳಿಗೆ ನೀರು ಹರಿದು ಮಣ್ಣು, ಮರಳು ತುಂಬಿತು.್ತಕಿರುಗೂರು ಪಂಚಾಯಿತಿ ವ್ಯಾಪ್ತಿಯ ರೈತ (ಮೊದಲ ಪುಟದಿಂದ) ಭತ್ತದ ಗದ್ದೆಗಳನ್ನೆ ನಂಬಿದ್ದರು. ಆದರೆ ಮಳೆ ಅಷ್ಟೊಂದು ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಂಕಷ್ಟ ಎದುರಿಸಬೇಕಾಯಿತು. ನಂತರ ಜಿಲ್ಲಾಡಳಿತ, ತಾಲೂಕು ಆಡಳಿತ ಭತ್ತದ ಗದ್ದೆಗಳು ನಷ್ಟಗೊಂಡ ರೈತನಿಗೆ ಪರಿಹಾರ ಘೋಷಣೆ ಮಾಡಿತ್ತು. ಆದರೆ 6 ತಿಂಗಳು ಕಳೆದರೂ ಭತ್ತ ಬೆಳೆಯವ ಅನ್ನದಾತನಿಗೆ ಪರಿಹಾರ ಸಿಕ್ಕಿರಲಿಲ್ಲ.

ಇದರಿಂದ ನೊಂದ ರೈತ ಕಿರುಗೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಘಟಕದ ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದು; ಈ ಬಗ್ಗೆ ‘ಶಕ್ತಿ’ ‘ಅನ್ನದಾತನ ಗೋಳು ಕೇಳುವವರು ಯಾರು’ ಎಂಬ ಸುದ್ದಿಯನ್ನು ತಾ.1ರಂದು ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು.ಇದರಿಂದ ಎಚ್ಚೆತ್ತ ಅಧಿಕಾರಿಗಳು ಇದೀಗ ಹೊಸ ವರ್ಷದ ಶುಭ ಸಮಯದಲ್ಲಿ ಭತ್ತ ಬೆಳೆಯುವ ರೈತನಿಗೆ 14,637,21000 ಈ ರೀತಿಯಲ್ಲಿ ಪರಿಹಾರ ಹಣ ಬ್ಯಾಂಕ್ ಖಾತೆಗೆ ತಾ. 9ರಿಂದ ಸರ್ಕಾರದಿಂದ ಜಮೆ ಆಗುತ್ತಿದೆ. ಅನ್ನದಾತ ತನ್ನ ಬ್ಯಾಂಕ್ ಖಾತೆಯನ್ನು ಪರೀಕ್ಷಿಸ ಬಹುದಾಗಿದೆ. ರೈತರÀ ಮೊಗದಲ್ಲಿ ಹರ್ಷ ಮೂಡಿದೆ.

-ಹೆಚ್.ಕೆ.ಜಗದೀಶ್