ಮಡಿಕೇರಿ, ಡಿ. 8: ಚೇರಂಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಕಂಪೆನಿಯವರು ಮೇಜು, ಕುರ್ಚಿ, ಅಲ್ಮರಾ, ವಾಟರ್ ಫಿಲ್ಟರ್, ರ್ಯಾಕ್ ಮತ್ತು ಆಟೋಪಕರಣಗಳನ್ನು ಕೊಡುಗೆ ನೀಡಿದ್ದಾರೆ.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ, ಸಹ ಶಿಕ್ಷಕರು, ಕೊಟ್ಟುಕತ್ತೀರ ವಿಜಯಕುಮಾರ್ ಸಿ., ನಾಗೇಶ್ ಮತ್ತು ಬೆಳ್ಳಿಯಪ್ಪ ಹಾಜರಿದ್ದರು.