ಕೂಡಿಗೆ, ಜ. 8: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಮತದಾರರ ಹೆಸರನ್ನು ಮತದಾರರ ಮಟ್ಟಿಗೆ ಸೇರಿಸುವ ಕಾರ್ಯಕ್ರಮವು ಕೂಡಿಗೆಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಮಿಂಚಿನ ಮತದಾರರ ಪಟ್ಟಿಯ ನೋಂದಣಿಯಲ್ಲಿ ಹೊಸ ಯುವಕ ಯುವತಿಯರು ತಮ್ಮ ದಾಖಲಾತಿಗಳನ್ನು ನೀಡಿ ಹೆಸರನ್ನು ನೋಂದಾಯಿಸಿಕೊಂಡರು. ಈ ಸಂದರ್ಭ ಕೂಡಿಗೆ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ನೇಮಕಗೊಂಡ ಅಂಗನವಾಡಿ ಶಿಕ್ಷಕಿಯರಾದ ಶೋಭಾ, ರಕ್ಷಿತಾ, ಕೂಡಿಗೆ ಗ್ರಾ.ಪಂ ಸಿಬ್ಬಂದಿ ಪಾಪು ಹಾಗೂ ಸಂಬಂಧಿಸಿದ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.