ಕಡಂಗ, ಜ. 8: ಕಡಂಗ ಪಟ್ಟಣ ದಿಂದ ಕೆದಮುಳ್ಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ನರಕಯಾತನೆಯಾಗಿದೆ. ಈ ಹಾದಿಯಲ್ಲಿ ಶಾಲಾ ಮಕ್ಕಳು, ಸ್ಥಳೀಯರು ಹಾಗೂ ಮಹೇಂದ್ರ ರೆಸಾರ್ಟ್‍ಗೆ ಹೊರ ರಾಜ್ಯ ಮತ್ತು ವಿದೇಶಿಗರು ಸಂಚರಿಸುತ್ತಾರೆ. ರಸ್ತೆಯ ದುಸ್ಥಿತಿಯಿಂದ ಆತಂಕಕ್ಕೊಳಗಾಗಿದ್ದು ಸ್ಥಳೀಯ ಆಟೋ ಚಾಲಕರು ಈ ರಸ್ತೆಯಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯಿಸುತ್ತಿದ್ದು, ಇವರ ಧೋರಣೆ ಖಂಡಿಸಿ ಕಡಂಗದ ಆಟೋ ಚಾಲಕರ ಸಂಘ ಈ ರಸ್ತೆಯಲ್ಲಿ ಬಾಳೆ ಗಿಡ ನೆಡುವುದರ ಮೂಲಕ ಆಟೋ ಚಾಲನೆ ಸಂಪೂರ್ಣ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ಚಾಲಕರಾದ ಸಕೀರ್, ಅಶೋಕ್, ದಾವುದ್, ಅಣ್ಣಪ್ಪ, ಆಸಿಫ್, ರವೋಫ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
-ನೌಫಲ್ ಕಡಂಗ