ಮಡಿಕೇರಿ, ಜ. 8: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ 2006ರ ನಂತರ ನೇಮಕಾತಿ ಹೊಂದಿದ ನೌಕರರಿಗೆ ಹೊಸ ಮತ್ತು ಹಳೆಯ ಪಿಂಚಣಿ ಯೋಜನೆ ಇಲ್ಲದಿರುವುದನ್ನು ಖಂಡಿಸಿ ತಾ. 10 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಹಿಂದೆ ಬೇಡಿಕೆ ಈಡೇರಿಕೆಗೆ ಡಿ. 21 ರವರೆಗೆ ಗಡುವು ನೀಡಲಾಗಿತ್ತು. ಇದಕ್ಕೆ ಕೂಡ ಸರಕಾರ ಸ್ಪಂದಿಸದಿರುವುದರಿಂದ ಇದೀಗ ತಾ. 10 ರಂದು ಸಂಘದ ಕರೆಯಂತೆ ಕೊಡಗಿನ ಪಿಂಚಣಿ ವಂಚಿತ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ವಿಲ್‍ಪ್ರೆಡ್ ಕ್ರಾಸ್ತ ತಿಳಿಸಿದ್ದಾರೆ.