ಶನಿವಾರಸಂತೆ, ಡಿ. 8: ಮೈಸೂರಿನ ಲೋಕಾಭಿರಾಮ ಮಂದಿರದಲ್ಲಿ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಹಾಗೂ ಯೋಗ ಸಂಸ್ಥೆ ವತಿಯಿಂದ ನಡೆದ ಕರಾಟೆ ಸ್ಪರ್ಧೆಯಲ್ಲಿ ಶನಿವಾರಸಂತೆ-ಕೊಡ್ಲಿಪೇಟೆ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.

ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಧನುಷ್, ತೇಜಸ್, ಸೌಜನ್ಯ, ಸುಪ್ರಜ ಗುರುಕುಲ ಶಾಲೆಯ ಸಮರ್ಥ್, ಕೀರ್ತನ್, ಸುಹಾನಿ, ಶ್ರೀ ವಿಘ್ನೇಶ್ವರ ಶಾಲೆಯ ಹೇಮಂತ್, ಕೊಡ್ಲಿಏಪಟೆ ಎಸ್.ಎಲ್.ಎಸ್. ಶಾಲೆಯ ಚಂದನ್, ಸಾತ್ವಿಕ್, ಎಸ್.ಕೆ.ಎಸ್. ಶಾಲೆಯ ಬುಹ್ರಾನ್, ಡಿಂಪಲ್, ನಿಡ್ತ ಶಾಲೆಯ ಚಿರತ್ ಬ್ಲ್ಯಾಕ್ ಬೆಲ್ಟ್ ವಿಜೇತರು. ತರಬೇತುದಾರರಾಗಿ ಅರುಣ್, ಪಳನಿ, ಸಚಿತ್ ಕಾರ್ಯ ನಿರ್ವಹಿಸಿದ್ದರು.