ಕರಿಕೆ, ಜ. 8: ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳೊಂದಿಗೆ ಮೂರನೇ ಹಂತದ ಪಿಎಂಜಿಸಿವೈನಡಿ ಯಾವ ರಸ್ತೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಇಂದು ಮಡಿಕೇರಿಯಲ್ಲಿ ಚರ್ಚೆ ನಡೆಸಿದರು.

ಕರ್ನಾಟಕಕ್ಕೆ ಪಿಎಂಜಿಸಿವೈನಡಿ 5600 ಕಿ.ಮೀ. ರಸ್ತೆ ಮಂಜೂರು ಮಾಡಿರುವ ಪ್ರಧಾನಿ ನರೇಂದ್ರ ಮೋದೀಜಿ ಅವರಿಗೆ ಧನ್ಯವಾದಗಳನ್ನು ಸರ್ಮಪಿಸಿರುವ ಅವರು ಪ್ರತಿ ತಾಲೂಕಿಗೆ ಕನಿಷ್ಟ 25 ಕಿ.ಮೀ. ರಸ್ತೆ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಕೆ. ಗುಂಡಪ್ಪ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

-ಸುಧೀರ್ ಹೊದ್ದೆಟ್ಟಿ