ಪೆರಾಜೆ, ಜ. 7: ಸಮಾಜಮುಖಿ ಕೆಲಸಗಳು, ಗ್ರಾಮದ ಅಭಿವೃದ್ಧಿ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು , ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವುದು ಹೀಗೆ ಹತ್ತು ಹಲವು ಉದ್ದೇಶದಿಂದ ಸವ್ಯಸಾಚಿ ಕ್ರೀಡಾ ಮತ್ತು ಕಲಾ ಯುವಕ ಮಂಡಲವು ಪುತ್ಯಪೆರಾಜೆಯಲ್ಲಿ ಇತ್ತಿಚೆಗೆ ಉದ್ಘಾಟನೆಗೊಂಡಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ನಾಗೇಶ್ ಕರಿಂಬಿ ಉದ್ಘಾಟನೆ ನೆರವೇರಿಸಿದರು.
ನೂತನವಾಗಿ ರಚನೆಗೊಂಡ ಯುವಕಮಂಡಲದ ಅಧ್ಯಕ್ಷರಾಗಿ ಪವನ್ ಬಂಗಾರಕೋಡಿ , ಉಪಾಧ್ಯಕ್ಷರಾಗಿ ಸುಮನ್ ಪೀಚೆಮನೆ, ಕಾರ್ಯದರ್ಶಿ ಯಾಗಿ ಧನಂಜಯ ಕುಂಡಾಡು, ಖಜಾಂಚಿಯಾಗಿ ಲಿಖಿತ್ ಪೀಚೆಮನೆ ಆಯ್ಕೆಯಾದರು.
ಕಾರ್ಯಕ್ರಮವನ್ನು ಯೋಗರಾಜ್ ಹೊದ್ದೆಟ್ಟಿ ಪ್ರಾರ್ಥಿಸಿದರು, ಕಿಶೋರ್ ಕುಮಾರ್ ಬಳ್ಳಡ್ಕ ಸ್ವಾಗತಿಸಿ ಲೋಕೇಶ್ ಹೊದ್ದೆಟ್ಟಿಯವರ ನಿರೂಪಣೆ ಯೊಂದಿಗೆ ಕಿಶೋರ್ ಪೀಚೆಮನೆ ವಂದಿಸಿದರು.